ಭಟ್ಕಳ: ಕೆಲ ದಿನಗಳ ಹಿಂದೆ ಕೊಳೆ ಹಾವು ಕಚ್ಚಿ ಕಾಲು ಕೊಳೆಯುವ ಸ್ಥಿತಿಯಲ್ಲಿಯೇ ಜೀವನ ಸಾಗಿಸುತ್ತಿದ್ದ ಸೋನಾರಕೇರಿಯ ಕೃಷ್ಣಮೂರ್ತಿ ಶೇಟ ಇವರ ಚಿಕತ್ಸೆಗಾಗಿ ಶಾಸಕ ಮಾಂಕಾಳ್ ವೈದ್ಯ ಧನ ಸಹಾಯ ನೀಡಿದ್ದು ಸರ್ಕಾರದ ವೈದ್ಯಕೀಯ ವೆಚ್ಚದ ಧನಸಹಾಯ ಅಡಿಯಲ್ಲಿ ಇನ್ನಷ್ಟು ಪರಿಹಾರ ಒದಗಿಸಿಕೊಡುವ ಭರವಸೆ ನೀಡಿದರು.

ಕೆಲ ದಿನಗಳ ಹಿಂದೆ ಅವರು ಹಾವು ಕಡಿತದಿಂದ ತೊಂದರೆಗೀಡಾದ ಕೃಷ್ಣಮೂರ್ತಿ ಶೇಟ್‍ರವರು ವಾಟ್ಸಪ್ ನಲ್ಲಿ ಸಹಾಯಕ್ಕಾಗಿ ಸಾರ್ವಜನಿಕರಲ್ಲಿ ಮನವಿ ಮಾಡಿದ್ದರ ಹಿನ್ನಲೆಯಲ್ಲಿ ರವಿವಾರ ಸಂಜೆ ಮನೆಗೆ ಭೇಟಿ ನೀಡಿದ ಶಾಸಕರು ಅವರ ಆರೋಗ್ಯ ವಿಚಾರಿಸಿದರು. ಇದರಂತೆ ಇತ್ತೀಚಿಗೆ ಬಂದರ ರಸ್ತೆಯಲ್ಲಿ ರಸ್ತೆ ಅಪಘಾತದಲ್ಲಿ ಮೃತಪಟ್ಟ ತಲಗೋಡಿನ ನಾಗಪ್ಪ ನಾಯ್ಕ ರವರ ಮನೆಗೆ ತೆರಳಿ ಅವರ ಕುಟುಂಬಕ್ಕೆ ಸಾಂತ್ವನ ಹೇಳಿ ಧನ ಸಹಾಯ ಮಾಡಿದರು.

RELATED ARTICLES  ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಜಿಲ್ಲಾ ಕಾರ್ಯಕ್ರಮದಲ್ಲಿ ರವೀಂದ್ರ ಭಟ್ಟ ಸೂರಿಯವರಿಗೆ ಸನ್ಮಾನ

ಈ ಸಂದರ್ಭ ದಲ್ಲಿ ಶಾಸಕರೊಂದಿಗೆ ಬ್ಲ್ಯಾಕ್ ಕಾಂಗ್ರೇಸ ಅದ್ಯಕ್ಷ ವಿಠ್ಠಲ ನಾಯ್ಕ. ಜಯ ಕರ್ನಾಟಕ ಸಂಘದ ಅದ್ಯಕ್ಷ ಸುಧಾಕರ ನಾಯ್ಕ, ಪುರಸಭಾ ಸದಸ್ಯ ವೆಂಕಟೇಶ ನಾಯ್ಕ, ದಿನೇಶ ಶೇಟ್, ಹರೀಶ ಶೇಟ್. ಸತ್ಯನಾರಾಯಣ ಶೇಟ್ ಇದ್ದರು. ತಾಲೂಕಿನಲ್ಲಿ ಯಾರೇ ಸಂಕಷ್ಟದಲ್ಲಿದ್ದರೂ ತಕ್ಷಣ ಅವರ ನೆರವಿಗೆ ಧಾವಿಸುವ ಶಾಸಕ ಮಂಕಾಳ ವೈದ್ಯರ ಕಾರ್ಯ ನಿಜಕ್ಕೂ ಶ್ಲಾಘನೀಯ ಎಂದು ಹೇಳಲಾಗುತ್ತಿದೆ.

RELATED ARTICLES  ಎಂಜಿನಿಯರಿಂಗ್ ಕಾಲೇಜ್ ಸ್ಥಳಾಂತರಕ್ಕೆ ರಾಜಕಾರಣ: ವಿದ್ಯಾರ್ಥಿಗಳಿಂದ ಮನವಿ