ಕುಮಟಾ : ತಾಲೂಕಿನ ಹೆಗಡೆ ಮೂಲದ ನಿಧಿ ಪೈ ಯು.ಪಿ.ಎಸ್.ಸಿ ಪರೀಕ್ಷೆಯಲ್ಲಿ (ಐಎಎಸ್ ನಲ್ಲಿ) 110 ನೇ ಸ್ಥಾನ ಪಡೆಯುವ ಮೂಲಕ ಸಾಧನೆ ಮಾಡಿದ್ದಾಳೆ. ತಾಲೂಕಿನ ಹೆಗಡೆಯ ನಾರಾಯಣ ವಾಸುದೇವ ಪೈ(ಪಟೇಲರ ಮನೆ) ಹಾಗೂ ಶ್ರದ್ಧಾ ಪೈ ಅವರ ಮಗಳು. ಮಧ್ಯಮ ವರ್ಗದ ಕುಟುಂಬದಲ್ಲಿ ಜನಿಸಿದ ಈಕೆ ತನ್ನ ಪರಿಶ್ರಮದಿಂದಲೇ ಈ ಸಾಧನೆಯನ್ನು ಮಾಡಿದ್ದಾಳೆ. ಮೂರನೇಬಾರಿಗೆ  ಯು.ಪಿ.ಎಸ್.ಸಿ ಪರೀಕ್ಷೆ ಬರೆದಿರುವ ಈಕೆ ಹೈದ್ರಾಬಾದ್ ನಲ್ಲಿ ಅಭ್ಯಾಸ ಮುಂದುವರೆಸಿ ಅಲ್ಲಿಯೇ ನೆಲೆಸಿದ್ದಾಳೆ. ಹುಟ್ಟೂರಿಗೆ ಹಾಗೂ ತಾಲೂಕಿಗೆ ಕೀರ್ತಿತಂದ ನಿಧಿಗೆ ಎಲ್ಲೆಡೆಯಿಂದಲೂ ಅಭಿನಂದನೆ ವ್ಯಕ್ತವಾಗುತ್ತಿದೆ.

RELATED ARTICLES  ಶ್ರೀಮದ್ ವಿದ್ಯಾಧೀಶ ತೀರ್ಥರ ಚಾತುರ್ಮಾಸ್ಯ ಜುಲೈ 20 ರಿಂದ