ಕುಮಟಾ : ಹವ್ಯಕ ಸಮಾಜವು ಸುಶಿಕ್ಷಿತ ಸಮಾಜವಾಗಿದ್ದು, ಇಂದು ನಮ್ಮ ದೇಶದ ವಿವಿಧ ಭಾಗಗಳಲ್ಲಿ ಅಷ್ಟೇ ಅಲ್ಲದೆ ವಿದೇಶಗಳಲ್ಲಿಯೂ ಬೇರೆ ಬೇರೆ ರಂಗಗಳಲ್ಲಿ ಖ್ಯಾತಿಯನ್ನು ಗಳಿಸಿದ ಪ್ರತಿಭಾವಂತರು ಹವ್ಯಕ ಸಮಾಜದಲ್ಲಿ ಇದ್ದಾರೆ ಎಂದು ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾದ ದಿನಕರ ಶೆಟ್ಟಿ ಹೇಳಿದರು, ಅವರು ತಾಲೂಕಿನ ಗುಡೇಅಂಗಡಿ ಹವ್ಯಕ ಸಭಾಭವನದಲ್ಲಿ ನಡೆದ ಕಾಂಚಿಕಾಂಬಾ ವಲಯದ ಹವ್ಯಕ ಸಮಾಜ ಸೇವಾ ಸಂಘದ ‘ವಾರ್ಷಿಕ ಸ್ನೇಹ ಕೂಟ’ ಕಾರ್ಯಕ್ರಮದಲ್ಲಿ ಹವ್ಯಕ ಸಮಾಜದ ವತಿಯಿಂದ ಗೌರವ ಸ್ವೀಕರಿಸಿ ಮಾತನಾಡಿದರು.

RELATED ARTICLES  ಸಮಾಜಕ್ಕೆ ಅಮೃತ ನೀಡುವ ಪಣ ತೊಡಿ: ಕಾರ್ಯಕರ್ತರಿಗೆ ರಾಘವೇಶ್ವರ ಶ್ರೀ ಸಲಹೆ

ಎಲ್ಲಾ ಸಮಾಜಗಳೊಡನೆ ಶಾಂತಿಯುತ ಹಾಗೂ ಸೌಹಾರ್ದಯುತ ಸಂಬಂಧವನ್ನು ಬಯಸುವ ಹವ್ಯಕ ಸಮಾಜದವರು, ಎಲ್ಲಾ ವರ್ಗದವರನ್ನು ಪ್ರೀತಿಸುವ ಗುಣವನ್ನು ಹೊಂದಿರುವುದು ನಿಮ್ಮ ಇನ್ನೊಂದು ವಿಶೇಷತೆಯಾಗಿದೆ. ನಿಮ್ಮ ಸಮಾಜದವರ ಹಿತರಕ್ಷಣೆಗಾಗಿ ಮುಂದೆಯೂ ಕೂಡಾ ನಾನು ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಲಿದ್ದೇನೆ ಎಂದು ಹೇಳಿದರು. ಸನ್ಮಾನಿಸಿದ ಹಾಗೂ ‘ವಾರ್ಷಿಕ ಸ್ನೇಹ ಕೂಟ’ದಲ್ಲಿ ಉಪಸ್ಥಿತರಿದ್ದ ಹವ್ಯಕ ಸಮಾಜಬಾಂಧವರಿಗೆ ಧನ್ಯವಾದ ಸಮರ್ಪಿಸಿದರು.

RELATED ARTICLES  ಹೇಗಿತ್ತು ಹೇಗಾಯ್ತು ಕುಮಟಾ ಮಣಕಿ ಮೈದಾನ! ಅಯ್ಯೋ ಗೋಳು ಕೇಳೋರೆ ಇಲ್ವೇ?

ಸಾಹಿತಿಗಳಾದ ಶ್ರೀ ಶ್ರೀಧರ ಬಳಿಗಾರ ಅವರು ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದರು. ಹವ್ಯಕ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ಆರ್. ಎನ್. ಹೆಗಡೆ, ಮುಖ್ಯ ಅತಿಥಿಗಳಾಗಿ ಶ್ರೀ ಹರಿಶಂಕರ ಜಿ. ಹೆಗಡೆ, ನಿವೃತ್ತ ಪ್ರಾಚಾರ್ಯ ಶ್ರೀ ಎಸ್. ಎಸ್. ಹೆಗಡೆ, ಶ್ರೀ ಎಸ್. ಟಿ. ಭಟ್ ಹೊಲನಗದ್ದೆ ಇವರು ವೇದಿಕೆಯಲ್ಲಿ ಇದ್ದರು. ರವೀಂದ್ರ ಭಟ್ ಸೂರಿ ಅವರು ಕಾರ್ಯಕ್ರಮವನ್ನು ನಿರೂಪಿಸಿದರು.