ಹೊನ್ನಾವರ : ತಾಲೂಕಿನ ನಾಜಗಾರದ ಆಚಾರಿಕೇರಿ ಹತ್ತಿರದ ರಾಷ್ಟ್ರೀಯ ಹೆದ್ದಾರಿ 69 ರಲ್ಲಿ ಸರಕು ತುಂಬಿದ ಲಾರಿ ಚಾಲಕನ
ನಿಯಂತ್ರಣ ತಪ್ಪಿ ಪಲ್ಟಿಯಾಗಿರುವ ಘಟನೆ ಸಂಭವಿಸಿದೆ ಎಂದು ತಿಳಿದುಬಂದಿದೆ.
ಮಂಗಳೂರಿನಿಂದ ಹುಬ್ಬಳ್ಳಿಗೆ ತೆರಳುತ್ತಿದ್ದ ಲಾರಿ ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಅಂಚಿಗೆ ಇಳಿದ ಪರಿಣಾಮ ಪಲ್ಟಿ ಆಗಿದ್ದು, ಲಾರಿ ಚಾಲಕನಿಗೆ ಸಣ್ಣಪುಟ್ಟ ಗಾಯವಾಗಿದೆ ಎನ್ನಲಾಗಿದೆ.
ನಾಜಗಾರ ಕ್ರಾಸ್,ಅಪ್ಸರಕೊಂಡ ಕ್ರಾಸ್, ಹೊಸಪಟ್ಟಣ ರಾಷ್ಟ್ರೀಯ ಹೆದ್ದಾರಿ ರಸ್ತೆ ಕೆಲವೆಡೆ ಅವೈಜ್ಞಾನಿಕ ತಿರುವು ಹಾಗೂ ಯುಟರ್ನಗಳು ತೀರಾ ಅಪಾಯಕಾರಿಯಾಗಿದ್ದು ಹೆಚ್ಚಿನ ಅಪಘಾತಗಳಿಗೆ ಎಡೆಮಾಡಿಕೊಡುತ್ತಿದೆ.
ಈ ಪ್ರಕರಣವು ಮಂಕಿ ಪೊಲೀಸ್ ಠಾಣಿಯಲ್ಲಿ ದಾಖಲಾಗಿದೆ ಎಂದು ವರದಿಯಾಗಿದೆ.