ಹೊನ್ನಾವರ : ಪಟ್ಟಣದ ಜನತೆಯ ಕುಡಿಯುವ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರ ಒದಗಿಸುವ ನಿಟ್ಟಿನಲ್ಲಿ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕ ಸನ್ಮಾನ್ಯ ದಿನಕರ ಶೆಟ್ಟಿಯವರ ಸತತ ಪ್ರಯತ್ನದ ಫಲವಾಗಿ ಶರಾವತಿ ಕುಡಿಯುವ ನೀರಿನ ಯೋಜನೆಯು ಇಂದು ಪೂರ್ಣಗೊಂಡಿದೆ.
ಪ್ರಯೋಗಾರ್ಥವಾಗಿ ನೀರನ್ನು ಬಿಡಲಾಗದ್ದು, ನೀರು ಗೇರುಸೊಪ್ಪದಿಂದ ಪೈಪ್ ಲೈನ್ ಮೂಲಕ ಹೊನ್ನಾವರದಲ್ಲಿ ನಿರ್ಮಿಸಲಾದ ಟ್ಯಾಂಕ್ ಗೆ ಯಶಸ್ವಿಯಾಗಿ ತಲುಪಿದೆ. ಪೈಪ್ ಹಾಗೂ ಸರಬರಾಜು ಘಟಕ ಶುದ್ಧೀಕರಣವಾಗಿ, ಇನ್ನೆರಡು ದಿನಗಳಲ್ಲಿ ಪರಿಶುದ್ಧ ಕುಡಿಯುವ ನೀರು ಪ್ರಭಾತನಗರದ ಜನರಿಗೆ ಲಭ್ಯವಾಗಲಿದೆ.
ಒಟ್ಟು 122ಕೋಟಿ ಅಂದಾಜು ವೆಚ್ಚದಲ್ಲಿ ಪೂರ್ಣಗೊಂಡಿರುವ ಈ ಯೋಜನೆ ಮಾನ್ಯ ದಿನಕರ ನಿರಂತರ ಕಾಳಜಿ ಹಾಗೂ ಶೆಟ್ಟಿಯವರ ಸತತ ಪ್ರಯತ್ನದ ಫಲವಾಗಿ ಅತ್ಯಂತ ಕಡಿಮೆ ಅವಧಿಯಲ್ಲಿ ಪೂರ್ಣಗೊಂಡು ಸಾರ್ವಜನಿಕರ ಉಪಯೋಗಕ್ಕೆ ಸಜ್ಜುಗೊಂಡಿದೆ. ಕಾಮಗಾರಿಯ ಕೊನೆಯ ಹಂತದಲ್ಲಿ ತಲೆದೋರಿದ ಕೆಲವು ತಾಂತ್ರಿಕ ಅಡಚಣೆಗಳ ಕಾರಣದಿಂದ ಕೊಂಚ ವಿಳಂಬವಾಗಿತ್ತು. ಅಧಿಕಾರಿಗಳೊಂದಿಗೆ ಹಾಗೂ ಅಭಿಯಂತರರೊಂದಿಗೆ ನಿರಂತರ ಸಂಪರ್ಕದಲ್ಲಿದ್ದ ಶಾಸಕರು, ಸಭೆಗಳನ್ನು ಕರೆದು, ಆಗಾಗ ಸ್ಥಳಕ್ಕೆ ಭೇಟಿನೀಡಿ ಅಗತ್ಯ ಸಲಹೆ ಸೂಚನೆಗಳನ್ನು ನೀಡುವಮೂಲಕ ಅಡಚಣೆಗಳನ್ನು ನಿವಾರಿಸಲು ಯಶಸ್ವಿಯಾಗಿದ್ದಾರೆ.