ಹೊನ್ನಾವರ: ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದ ಖಾಸಗಿ ಬಸ್ ಮತ್ತು ಕಾರ ನಡುವೆ ಅಪಘಾತ ಸಂಬಂಧಿಸಿ ಕಾರನಲ್ಲಿ ಇದ್ದ ಗುತ್ತಿಗೆದಾರ ಸ್ಥಳದಲ್ಲಿ ಮೃತಪಟ್ಟಿರುವ
ಘಟನೆ ಮಂಕಿ ಸಮೀಪದ ರಾಷ್ಟ್ರೀಯ
ಹೆದ್ದಾರಿಯಲ್ಲಿ ನಡೆದಿದೆ ಎಂದು ತಿಳಿದುಬಂದಿದೆ.
ಖಾಸಗಿ ಬಸ್ ಮಂಗಳೂರಿನಿಂದ ಮುಂಬೈಗೆ ತೆರಳುತ್ತಿದ್ದು ಬಸ್ ನಲ್ಲಿ ಸುಮಾರು 36ವಮಂದಿ ಪ್ರಯಾಣಿಕರು ಪ್ರಯಾಣಿಸುತ್ತಿದ್ದರು ಎನ್ನಲಾಗಿದೆ.
ಮಂಕಿ ಸಮೀಪ ಬಸ್ ಚಾಲಕ ಕಾರ ಒಂದಕ್ಕೆ ಡಿಕ್ಕಿ ಹೊಡೆದು ನಿಯಂತ್ರಣ ತಪ್ಪಿದ್ದರಿಂದ
ಬಸ್ ಹೆದ್ದಾರಿ ಪಕ್ಕದಲ್ಲಿ ಪಲ್ಟಿ ಆಗಿದೆ ಅಲ್ಲದೇ,
ಅಪಘಾತದಲ್ಲಿ ಕಾರನಲ್ಲಿದಲ್ಲಿದ್ದ ಗುತ್ತಿಗೆದಾರ ಮೋಹನ್ ನಾಯ್ಕ ಸ್ಥಳದಲ್ಲೆ ಸಾವನಪ್ಪಿರುವ ಘಟನೆ ನಡೆದಿದೆ.
ಅಪಘಾತದ ತೀವ್ರತೆಗೆ 25ಕ್ಕೂ ಹೆಚ್ಚು ಪ್ರಯಾಣಿಕರು ಗಾಯಗೊಂಡದ್ದಾರೆ, ಪ್ರಯಾಣಿಕರನ್ನು ಹೊನ್ನಾವರ ಮತ್ತು ಭಟ್ಕಳ ತಾಲೂಕು ಆಸ್ಪತ್ರೆಯಲ್ಲಿ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.
ಮಂಕಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿ ಪ್ರಕರಣ ದಾಖಲಿಸಿಕೊಂಡಿದ್ದಾರೆ ಎಂದು ವರದಿಯಾಗಿದೆ.