ಮೂರನೇ ಬಾರಿ ಕುಮಟಾ ಹೊನ್ನಾವರ ಶಾಸಕರಾಗಿ ಆಯ್ಕೆಯಾಗಿರುವ ಶ್ರೀ ದಿನಕರ ಕೆ. ಶೆಟ್ಟಿಯವರಿಗೆ ನಾಡವರ ಸಮಾಜ ಬಾಂಧವರು ಅಭಿನಂದನಾ ಸಮಾರಂಭ ಮತ್ತು ಗೌರವ ಸನ್ಮಾನ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ತೊರ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಆನಂದು ಕವರಿ ಅವರ ನೇತೃತ್ವದಲ್ಲಿ, ತೊರ್ಕೆಯ ನಾಡವರ ಸಭಾಭವನದಲ್ಲಿ ಈ ಕಾರ್ಯಕ್ರಮವು ನೆರವೇರಿತು.

ತೊರ್ಕೆ, ಗೋಕರ್ಣ, ನಾಡುಮಾಸ್ಕೇರಿ, ಹಿರೇಗುತ್ತಿ ಗ್ರಾಮಗಳ ನಾಡವರ ಸಮಾಜ ಬಾಂಧವರಿಂದ ಸನ್ಮಾನವನ್ನು ಸ್ವೀಕರಿಸಿದ ಶಾಸಕರು ಸಭೆಯನ್ನು ಉದ್ದೇಶಿಸಿ ಮಾತನಾಡಿ, ಕಳೆದ ಐದುವರ್ಷಗಳಲ್ಲಿ ಬಿಜೆಪಿ ಸರ್ಕಾರದಿಂದ ತೊರ್ಕೆ, ಗೋಕರ್ಣ, ನಾಡುಮಾಸ್ಕೇರಿ ಸೇರಿದಂತೆ ಎಲ್ಲಾ ಗ್ರಾಮಪಂಚಾಯತ ಭಾಗದ ಅಭಿವೃದ್ಧಿಗೆ ದಾಖಲೆಯ ಪ್ರಮಾಣದಲ್ಲಿ ಅನುದಾನವನ್ನು ಒದಗಿಸಿದ್ದೇನೆ. ಮೂಲಭೂತ ಅಗತ್ಯಗಳಾದ ನೀರು, ರಸ್ತೆ, ಶಿಕ್ಷಣ, ಆರೋಗ್ಯ ರಂಗಗಳ ಅಭಿವೃದ್ಧಿಗಾಗಿ ವಿಶೇಷ ಕಾಳಜಿವಹಿಸಿ ಕೆಲಸಮಾಡಿದ್ದೇನೆ. ಇದೆಲ್ಲವನ್ನು ಆಧರಿಸಿ ಈಬಾರಿಯ ಚುನಾವಣೆಯಲ್ಲಿ ನೀವೆಲ್ಲರೂ ನನಗೆ ಮತ್ತೊಮ್ಮೆ ಆಶೀರ್ವಾದ ಮಾಡಿದ್ದೀರಿ. ನಿಮ್ಮೆಲ್ಲರ ಅಭಿಮಾನಕ್ಕೆ ನಾನು ಚಿರಋಣಿ. ನಿಮ್ಮೆಲ್ಲರ ಪ್ರೀತಿ, ವಿಶ್ವಾಸ ಹಾಗೂ ಸಹಕಾರದೊಂದಿಗೆ ಮುಂದಿನ ಐದುವರ್ಷ ನಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಇನ್ನೂ ಹೆಚ್ಚಿನ ಉತ್ಸಾಹದಿಂದ ಶ್ರಮಿಸುತ್ತೇನೆ ಎಂದು ಹೇಳಿದರು.

RELATED ARTICLES  ಸರ್ಕಾರ ಮೀನುಗಾರರಿಗೆ ವಿಶೇಷ ಆರ್ಥಿಕ ಪ್ಯಾಕೇಜ್ ಘೋಷಿಸಲಿ; ಸರ್ಕಾರಕ್ಕೆ ನಾಗರಾಜ ತೊರ್ಕೆ ಆಗ್ರಹ

ತೊರ್ಕೆ ಗ್ರಾಮಪಂಚಾಯತ್ ಅಧ್ಯಕ್ಷ ಶ್ರೀ ಆನಂದು ಕವರಿ, ನಾಡವರ ಸಮಾಜದ ಮುಖಂಡರಾದ ಶ್ರೀ ಪ್ರದೀಪ ನಾಯಕ ದೇವರಬಾವಿ, ಆಶ್ರಯ ಫೌಂಡೇಶನ್ ಗೌರವಾಧ್ಯಕ್ಷ ಶ್ರೀ ರಾಜೀವ್ ಗಾಂವಕರ, ಗೋಕರ್ಣ ಗ್ರಾಮಪಂಚಾಯತ್ ಮಾಜಿ ಅಧ್ಯಕ್ಷ ಶ್ರೀ ಮೋಹನ ನಾಯಕ, ತೊರ್ಕೆ ಗ್ರಾಮಪಂಚಾಯತ್ ಸದಸ್ಯರಾದ ಮಂಜುನಾಥ ನಾಯಕ ಹಾಗೂ ಮಹೇಶ ನಾಯಕ ದೇವರಬಾವಿ, ಮಾಜಿ ಸದಸ್ಯ ಗಣಪತಿ ನಾಯಕ ಮಳಲಿ, ನಾಡುಮಾಸ್ಕೇರಿ ಗ್ರಾಮಪಂಚಾಯತ್ ಸದಸ್ಯ ರಾಜೇಶ ನಾಯಕ, ತಾಲೂಕು ಪಂಚಾಯತ್ ಮಾಜಿ ಸದಸ್ಯ ವೆಂಕಟರಮಣ ಕವರಿ, ಯುವಕಸಂಘದ ಅಧ್ಯಕ್ಷ ಶ್ರೀ ದರ್ಶನ್ ಕವರಿ, ಜಿಲ್ಲಾ ಬಿಜೆಪಿ ಸದಸ್ಯ ಶ್ರೀ ರಮೇಶ ಪಂಡಿತ್ ವೇದಿಕೆಯಲ್ಲಿ ಇದ್ದರು.

RELATED ARTICLES  ಶ್ರೀ ಭಾರತಿ ಆಂಗ್ಲ ಮಾಧ್ಯಮ ಶಾಲೆ ಕವಲಕ್ಕಿಯಲ್ಲಿ ಶಾಸ್ತ್ರೀಯ ಸಂಗೀತ ತರಗತಿ ಪ್ರಾರಂಭ.