ಉತ್ತರಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘ (ರಿ.) ಕುಮಟಾ ಇದರ ಅಮೃತ ಮಹೋತ್ಸವ ಕಾರ್ಯಕ್ರಮವು ಇಂದು ಚಿತ್ರಿಗಿಯ ಶ್ರೀ ರಾಮಚಂದ್ರ ದೇವಸ್ಥಾನದ ಸಭಾಭವನದಲ್ಲಿ ನೆರವೇರಿತು. ಈ ಕಾರ್ಯಕ್ರಮವನ್ನು ಶ್ರೀ ದಿನಕರ ಕೆ ಶೆಟ್ಟಿಯವರು ಉದ್ಘಾಟನೆ ಮಾಡಿದರು.

ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮೂರನೇಬಾರಿ ಆಯ್ಕೆಯಾಗಿರುವ ಶ್ರೀ ದಿನಕರ ಕೆ. ಶೆಟ್ಟಿ ಅವರನ್ನು ಜಿಲ್ಲಾ ಗಾಣಿಗ ಸಮಾಜದ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ಶಾಸಕ ದಿನಕರ ಶೆಟ್ಟಿಯವರು ನಮ್ಮ ಗಾಣಿಗಸಮಾಜವು ಅತ್ಯಂತ ಚಿಕ್ಕ ಹಾಗೂ ಚೊಕ್ಕ ಸಮಾಜವಾಗಿದ್ದು ಇತರೆಲ್ಲಾ ಸಮಾಜದವರೊಡನೆ ಸೌಹಾರ್ದಯುತವಾಗಿ ಬದುಕುವ ಸಮಾಜವಾಗಿದೆ. ಇದೇ ಕಾರಣದಿಂದ ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಮತದಾರರು ನಮ್ಮಮೇಲೆ ಭರವಸೆಯನ್ನಿಟ್ಟು ನಮಗೆ ನಿರಂತರವಾಗಿ ಆಶೀರ್ವಾದ ಮಾಡುತ್ತಾ ಬಂದಿದ್ದಾರೆ. ಮತದಾರರು ನಮ್ಮಮೇಲೆ ಇಟ್ಟಿರುವ ಪ್ರೀತಿಗೆ ನಾವು ಎಂದಿಗೂ ಚಿರಋಣಿ. ಯಾವ ಸಮಾಜದವರಿಗೂ ಅನ್ಯಾಯವಾಗದಂತೆ ನೋಡಿಕೊಳ್ಳುವುದು ನಮ್ಮ ಜವಾಬ್ದಾರಿ. ಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಯೇ ನಮ್ಮ ಗುರಿ ಎಂದು ಹೇಳಿದರು.

RELATED ARTICLES  ಕಾರವಾರದ ದೊಡ್ಡ ಗ್ರಾಮದ ಕಸ ವಿಲೇವಾರಿಗೇ ಜಾಗ ಇಲ್ಲವೇ? ಊರೆಲ್ಲ ಹರಡುತ್ತಿದೆ ದುರ್ವಾಸನೆ!

ಅಮೃತಮಹೋತ್ಸವ ಕಾರ್ಯಕ್ರಮ ಸಮಿತಿಯ ಅಧ್ಯಕ್ಷರಾದ ಶ್ರೀ ರತ್ನಾಕರ ಸುಬ್ರಾಯ ಶೆಟ್ಟಿಯವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮಾಜಿ ಶಾಸಕಿ ಶ್ರೀಮತಿ ಶಾರದಾ ಮೋಹನ ಶೆಟ್ಟಿಯವರು ಅಮೃತ ಮಹೋತ್ಸವ ಸ್ಮರಣಸಂಚಿಕೆಯನ್ನು ಬಿಡುಗಡೆ ಮಾಡಿದರು. ಮುಖ್ಯ ಅತಿಥಿಗಳಾಗಿ ಉತ್ತರ ಕನ್ನಡ ಜಿಲ್ಲಾ ಗಾಣಿಗ ಸಮಾಜ ಸೇವಾ ಸಂಘದ ಅಧ್ಯಕ್ಷ ಶ್ರೀ ಕೇಶವ ಆರ್. ಶೆಟ್ಟಿ, ಶಿವಮೊಗ್ಗ ಜಿಲ್ಲಾ ಗಾಣಿಗ ಸಂಘದ ಮಾಜಿ ಅಧ್ಯಕ್ಷ ಶ್ರೀ ಸುಬ್ಬಯ್ಯ ಗಾಣಿಗ, ಉಡುಪಿ ಜಿಲ್ಲಾ ಸೋಮಕ್ಷತ್ರಿಯ ಸಮಾಜದ ಅಧ್ಯಕ್ಷ ಶ್ರೀ ಸೂರ್ಯನಾರಾಯಣ ಗಾಣಿಗ, ಶ್ರೀ ನಾರಾಯಣ ಶೆಟ್ಟಿ ಭಟ್ಕಳ, ಶಿರಸಿ ಲಕ್ಷ್ಮಿನಾರಾಯಣ ದೇವಸ್ಥಾನದ ಅಧ್ಯಕ್ಷ ಶ್ರೀ ದೀಪಕ ಶೆಟ್ಟಿ ಅವರು ವೇದಿಕೆಯಲ್ಲಿ ಇದ್ದರು. ಸ್ವಾಗತ ಸಮಿತಿ ಅಧ್ಯಕ್ಷ ಶ್ರೀ ದಾಮೋದರ ಶೆಟ್ಟಿಯವರು ಸರ್ವರನ್ನು ಸ್ವಾಗತಿಸಿದರು, ಕಾರ್ಯದರ್ಶಿ ಗಣೇಶ ಶೆಟ್ಟಿ ಅವರು ಎಲ್ಲರಿಗೆ ವಂದಿಸಿದರು.

RELATED ARTICLES  ಕೆಎಲ್ಇ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ದ್ವಿತೀಯ ಸ್ಥಾನ ಪಡೆದು ಬೆಳ್ಳಿ ಗೆದ್ದ ಅಂಕೋಲಾದ ಐಶ್ವರ್ಯ.