ಭಟ್ಕಳ: ಗುತ್ತಿಗೆದಾರರೊಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಕಾಯ್ಕಿಣಿ ಗ್ರಾಮದ ಬಾಕಡಕೇರಿಯಲ್ಲಿ ಎಂದು ತಿಳಿದುಬಂದಿದೆ. ಮೃತ ಗುತ್ತಿಗೆದಾರನನ್ನು ದಿನೇಶ ತಂದೆ ಮಂಜಪ್ಪ ನಾಯ್ಕ (28) ಶಿರಾಲಿ ಮಣ್ಣಹೊಂಡ ನಿವಾಸಿ ಎಂದು ಗುರುತಿಸಲಾಗಿದೆ. ರಸ್ತೆ ಮತ್ತು ಇನ್ನಿತರ ಕಾಮಗಾರಿಗಳ ಗುತ್ತಿಗೆದಾರನಾಗಿ ಕೆಲಸ ಮಾಡಿಕೊಂಡಿದ್ದು ಕೆಲಸಕ್ಕೆ ಬೆಳಿಗ್ಗೆ ಮನೆಯಿಂದ ಹೋದವನು ಮನೆಗೆ ಬಾರದೆ ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ಬಾಕಡಕೇರಿ ಸ್ಮಶಾನದ ಸಮೀಪ ಗೇರು ಮರಕ್ಕೆ ನೈಲಾನ್ ಹಗ್ಗದಿಂದ ನೇಣು ಹಾಕಿಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎನ್ನಲಾಗಿದೆ.
ಈ ಪ್ರಕರಣದ ಬಗ್ಗೆ ಮುರ್ಡೇಶ್ವರ ಪೊಲೀಸ್ ಠಾಣೆಯಲ್ಲಿ ಮೃತನ ಅಣ್ಣ ಸುಬ್ರಾಯ ನಾಯ್ಕ ದೂರು ನೀಡಿದ್ದು ದೂರನ್ನು ದಾಖಲಿಸಿ ಕೊಂಡ ಪಿ.ಎಸ್.ಐ ಮಂಜುನಾಥ ಘಟನಾ ಸ್ಥಳಕ್ಕೆ ಭೇಟಿ ನೀಡಿ ತನಿಖೆ ಕೈಗೊಂಡಿದ್ದು, ಮೃತ ದೇಹವನ್ನ ಮುರ್ಡೇಶ್ವರ ಆಸ್ಪತ್ರೆಗೆ ರವಾನಿಸಿ ಮೃತದೇಹವನ್ನು ಮರಣೋತ್ತರ ಪರೀಕ್ಷೆ ನಡೆಸಿದ ಬಳಿಕ ಕುಟುಂಬದವರಿಗೆ ನೀಡಿದ್ದು ಇನ್ನೂ ಪೋಲಿಸರ ತನಿಖೆಯಲ್ಲಿ ಆತ್ಮಹತ್ಯೆಗೆ ನಿಖರವಾದ ಕಾರಣ ತಿಳಿದು ಬರಬೇಕಾಗಿದೆ.