ಮುಂಡಗೋಡ: ಅಂಗಡಿಯ ಮುಂದೆ ನಿಲ್ಲಿಸಿಟ್ಟಿದ್ದ ಬೈಕನ್ನು ಕಳ್ಳತನ ಮಾಡಿ ಪರಾರಿಯಾಗಿದ್ದ ಅಂತರ ಜಿಲ್ಲಾ ಕಳ್ಳರನ್ನು ಬಂಧಿಸುವಲ್ಲಿ ಮುಂಡಗೋಡ್ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದು ತಿಳಿದು ಬಂದಿದೆ.
ಬಂಧಿತ ಆರೋಪಿಗಳಾದ ಶಿಗ್ಗಾಂವಿಯ ತಡಸನ ರಮೇಶ್ ಮುಗಳಿಗಟ್ಟಿ (26), ಮತ್ತು ಮಂಜುನಾಥ್ ಸೋಮನಕೊಪ್ಪ (32 ) ಎಂದು ಗುರುತಿಸಲಾಗಿದೆ.
ಮೇ 16 ರಂದು ಮುಂಡಗೋಡ್ ಪಟ್ಟಣದ ಕಲಾಲ್ ಓಣಿಯಲ್ಲಿ ಸ್ಪ್ಲೆಂಡರ್ ಬೈಕ್ ನ್ನು ಕದ್ದು ಪರಾರಿಯಾಗಿದ್ದ ಪೀರ್ ಸಾಬ್ ಬಂಗ್ಲಿ ಆಲೆ ಎಂಬಾತವನ್ನು ಬಂಧಿಸಿದ್ದಾರೆ. ಈ ಬಗ್ಗೆ ಮುಂಡಗೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ಹಾಕಲಾಗಿತ್ತು ಎನ್ನಲಾಗಿದೆ.
ಎಸ್ ಎಸ್ ಸಿಮಾನಿ ಮತ್ತು ಪಿ ಎಸೈ ಯಲ್ಲಾಲಿಂಗ ಕುನ್ನೂರ್ ನೇತೃತ್ವದಲ್ಲಿ ವಿಶೇಷ ಪೊಲೀಸ್ ತಂಡ ರಚನೆ ಮಾಡಿ ಬೈಕ್ ಕಳ್ಳನನ್ನು ಪತ್ತೆ ಹಚ್ಚಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.