ದಾಂಡೇಲಿ: ಬರಹಗಾರ ಎನ್. ಜಯಚಂದ್ರನ್ ಅವರ ‘ಹಸಿರುಡುಗೆಯ ಮಿಂಚು’ ಲೇಖನಗಳ ಸಂಕಲನ ತಾಲೂಕಿನ ಕೋಗಿಲಬನ ಗ್ರಾಮದಲ್ಲಿನ ಕುಳಗಿ ರಸ್ತೆಯ ವೈಶ್ಯವಾಣಿ ಸಮಾಜದ ಸಭಾಭವನದಲ್ಲಿ ಜೂ.೪ ರಂದು ಭಾನುವಾರ ಸಂಜೆ ೫ ಗಂಟೆಗೆ ‘ಹಣತೆ’ ಸಾಹಿತ್ಯಕ, ಸಾಂಸ್ಕೃತಿಕ ಜಗಲಿ ದಾಂಡೇಲಿ ತಾಲೂಕು ಘಟಕ ಹಮ್ಮಿಕೊಂಡಿದೆ. ಹಮ್ಮಿಕೊಳ್ಳಲಾಗಿದೆ. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಹಣತೆ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೋಡಿ ಅವರು ವಹಿಸಲಿದ್ದು, ನಾಡಿನ ಹಿರಿಯ ತಬಲಾ ವಾದಕ ಉಸ್ತಾದ್ ಕೆ.ಎಲ್.ಜಮಾದಾರ್ ಉದ್ಘಾಟಿಸಲಿದ್ದಾರೆ. ಕೇಂದ್ರ ಸಾಹಿತ್ಯ ಅಕಾಡೆಮಿಯ ಕನ್ನಡ ಭಾಷಾ ಸಲಹಾ ಮಂಡಳಿ ಸದಸ್ಯ ಚೆನ್ನಪ್ಪ ಅಂಗಡಿ ಕೃತಿ ಬಿಡುಗಡೆ ಮಾಡಲಿದ್ದಾರೆ. ಮುಖ್ಯ ಅತಿಥಿಯಾಗಿ ಹಣತೆ ಕಾರವಾರ ತಾಲೂಕು ಘಟಕದ ಅಧ್ಯಕ್ಷ ನಾಗರಾಜ ಹರಪನಳ್ಳಿ ಪಾಲ್ಗೊಳ್ಳಲಿದ್ದಾರೆ. ಹಣತೆ ಜಿಲ್ಲಾ ಸಮಿತಿ ಸದಸ್ಯ ಉಪೇಂದ್ರ ಘೋರ್ಪಡೆ ಪುಸ್ತಕಾವಲೋಕನ ಮಾಡಲಿದ್ದಾರೆ. ಹಣತೆ ಜಿಲ್ಲಾ ಸಂಚಾಲಕರೂ ಆಗಿರುವ ಎನ್. ಜಯಚಂದ್ರನ್ ಅವರು ಬಿಡುಗಡೆಯಾಗಲಿರುವ ಕೃತಿಯ ಬಗ್ಗೆ ಮಾತನಾಡಲಿದ್ದಾರೆ.
ಸ್ಥಳೀಯ ಗ್ರಾ.ಪಂ. ಅಧ್ಯಕ್ಷ ಅಶೋಕ ನಾಯ್ಕ, ಸದಸ್ಯ ರಮೇಶ ನಾಯ್ಕ, ಹಣತೆ ಹಳಿಯಾಳ ತಾಲೂಕು ಘಟಕದ ಅಧ್ಯಕ್ಷ ರಾಮಕೃಷ್ಣ ಗುನಗ ಗೌರವ ಉಪಸ್ಥಿತರಿರಲಿದ್ದಾರೆ. ಸಭಾ ಕಾರ್ಯಕ್ರಮದ ನಂತರ ಸ್ಥಳೀಯ ಅಭಿಷೇಕ್ ಡ್ಯಾನ್ಸ್ ಅಕಾಡೆಮಿ ಅವರಿಂದ ನೃತ್ಯ ವೈಭವ ನಡೆಯಲಿದೆ. ಆಸಕ್ತರು ಕಾರ್ಯಕ್ರಮಕ್ಕೆ ಬರಬೇಕು ಎಂದು ಹಣತೆ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷ ರಾಘವೇಂದ್ರ ಗಡೆಪ್ಪನವರ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.