ಕುಮಟಾ : ಪ್ರಾಥಮಿಕ ಹಂತದ ಶಿಕ್ಷಣವನ್ನು ಕನ್ನಡ ಮಾಧ್ಯಮದಲ್ಲಿ ಪೂರೈಸಿದವರಿಗೂ ಮಾಧ್ಯಮ ಪ್ರಮಾಣ ಪತ್ರದ ಸೌಲಭ್ಯ ಒದಗಿಸುವ ಕುರಿತು ಕೊಂಕಣಿ ಅಕಾಡಮಿಯ ಮಾಜಿ ಸದಸ್ಯ ಹಾಗೂ ಶಿಕ್ಷಕ ಕಾಗಾಲ ಚಿದಾನಂದ ಭಂಡಾರಿ ಪ್ರಾಥಮಿಕ ಮತ್ತು ಪ್ರೌಢ ಶಿಕ್ಷಣ ಸಚಿವರಾದ ಮಧು ಬಂಗಾರಪ್ಪ ಅವರಿಗೆ ಪತ್ರ ಮುಖೇನ ವಿನಂತಿಸಿದ್ದಾರೆ.

ಕರ್ನಾಟಕ ರಾಜ್ಯದಲ್ಲಿ ಒಂದನೆಯ ತರಗತಿಯಿಂದ ಹತ್ತನೆಯ ತರಗತಿಯ ತನಕ ಕನ್ನಡ ಮಾಧ್ಯಮದಲ್ಲಿ ವ್ಯಾಸಂಗ ಮಾಡಿದ ವಿದ್ಯಾರ್ಥಿಗಳಿಗೆ ಮೀಸಲಾತಿಯನ್ನು ನೀಡುವ ವ್ಯವಸ್ಥೆಯನ್ನು ತಮ್ಮ ತೀರ್ಥರೂಪರಾದ ಸನ್ಮಾನ್ಯ ಎಸ್ ಬಂಗಾರವಪ್ಪ ಅವರು ಮುಖ್ಯಮಂತ್ರಿಗಳಾಗಿದ್ದ ಅವಧಿಯಲ್ಲಿ ಜಾರಿಗೊಳಿಸಲಾಗಿದೆ.
ಇದರಿಂದ ಹಲವಾರು ಮಂದಿ ಪ್ರಯೋಜನವನ್ನು ಪಡೆದಿರುತ್ತಾರೆ.ಹಾಗೂ ಕನ್ನಡ ಭಾಷೆಯ ಉಳಿವಿಗೆ ಇದು ಸಹಕಾರಿಯೂ ಆಗಿದೆ.ಕಾಲ ಸರಿದಂತೆ ಖಾಸಗಿ ಉದ್ಯಮಗಳು ಪ್ರಭಲವಾಗಿ ವಿಜ್ಞಾನ ತಂತ್ರಜ್ಞಾನದ ಪ್ರಭಾವದಿಂದ ಬಹುತೇಕ ಹೆಚ್ಚಿನವರು ಆಂಗ್ಲ ಮಾಧ್ಯಮದ ಕಲಿಕೆಯತ್ತ ಆಸಕ್ತಿ ವಹಿಸಿದ ಕಾರಣ ಅತೀ ಶೀಘ್ರದಲ್ಲಿ ಆಂಗ್ಲ ಮಾಧ್ಯಮ ಶಾಲೆಗಳು ಅಣಬೆಯಂತೆ ತಲೆ ಎತ್ತಿದೆ ಇದರಿಂದ ಕನ್ನಡ ಭಾಷೆಯ ಕಲಿಕೆಯ ಕುರಿತಾದ ಅನಾದರ ಹೆಚ್ಚಿತ್ತಾ ಬಂದಿದೆ.ಒಂದು ಕಾಲದಲ್ಲಿ ಪ್ರಾಥಮಿಕ ಶಿಕ್ಷಣ ವನ್ನು ಕನ್ನಡ ಮಾಧ್ಯಮದಲ್ಲಿ ಕಲಿಸುವ ಮುಚ್ಚಳಿಕೆ ಬರೆದುಕೊಟ್ಟು ನಿಯಮಕ್ಕೆ ವಿರುದ್ಧವಾಗಿ ಆಂಗ್ಲ ಮಾಧ್ಯಮದಲ್ಲಿ ಶಿಕ್ಷಣ ಕೊಡಲಾಗುತ್ತಿತ್ತು ಆದರೆ ನ್ಯಾಯಾಲಯದ ತೀರ್ಪಿನ ಬಳಿಕ ಅಂಥ ಶಾಲೆಗಳೂ ಅಧಿಕೃತವಾಗಿ ಆಂಗ್ಲ ಮಾಧ್ಯಮವಾಗಿ ಪೂರ್ಣ ಪ್ರಮಾಣದಲ್ಲಿ ರೂಪಾಂತರ ಗೊಂಡಿದೆ.ಸರಕಾರಿ ಶಾಲೆಗಳೂ ಕೂಡ ಆಂಗ್ಲ ಮಾಧ್ಯಮಕ್ಕೆ ಒಲವು ತೋರಿದ ಪರಿಣಾಮ ಬಹುತೇಕ ಕನ್ನಡ ಶಾಲೆಗಳೇ ಮುಚ್ಚುವ ಭೀತಿ ಎದುರಾಗಿದೆ. ಹೀಗಿರುವಾಗ ಬೆರಳೆಣಿಕೆಯಷ್ಟು ಖಾಸಗಿ ಶಾಲೆಗಳಲ್ಲಿ ಜೊತೆಗೆ ಹೆಚ್ಚಿನ ಸರಕಾರಿ ಶಾಲೆಗಳಲ್ಲಿ ಇದುವರೆಗೂ ಒಂದರಿಂದ ಐದನೇಯ ತರಗತಿಯ ತನಕ ಕನ್ನಡ ಮಾಧ್ಯಮದ ಶಿಕ್ಷಣ ಇರುವುದರಿಂದ ಇಲ್ಲಿ ಕಲಿಯುವ ಮಕ್ಕಳಿಗಾದರೂ ಕನ್ನಡ ಮಾಧ್ಯಮದ ಸೌಲಭ್ಯ ನೀಡುವಂತಾದರೆ ಕನಿಷ್ಠ ಪಕ್ಷ ಈ ಕಾರಣದಿಂದಾರೂ ಪ್ರಾಥಮಿಕ ಹಂತದಲ್ಲಿ ಮಾತೃಭಾಷೆಯನ್ನು ಕಲಿಯುವವರ ಸಂಖ್ಯೆ ಹೆಚ್ಚಾಗಬಹುದು ಎಂದು ಪತ್ರದಲ್ಲಿ ಉಲ್ಲೇಖಿಸಿದ್ದಾರೆ.

RELATED ARTICLES  ಯಲ್ಲಾಪುರ ಹಾಗೂ ಅಂಕೋಲಾದಲ್ಲಿ ಅಪಘಾತ

ಈ ವಿಷಯದಲ್ಲಿ ಗಂಭೀರ ಚಿಂತನೆ ನಡೆಸಿ
ಕನ್ನಡ ಮಾಧ್ಯಮವನ್ನು ಹಾಗೂ ಕನ್ನಡ ಭಾಷೆಯನ್ನು ಉಳಿಸಿ ಬೆಳೆಸಬೇಕೆಂದು ಅವರು ಆಗ್ರಹ ಪೂರ್ವಕವಾಗಿ ವಿನಂತಿಸಿದ್ದಾರೆ.

RELATED ARTICLES  ಉತ್ತರ ಕನ್ನಡದಲ್ಲಿಯೂ ಭೂಕಂಪನ ಅನುಭವ : ಡೈನಮೈಟ್ ಸ್ಪೋಟದ ಪರಿಣಾಮವೇ?