ಕುಮಟಾ : ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಂಚಗಿ ಹಾಗೂ ಸರಕಾರಿ ಹಿರಿಯ ಪ್ರಾಥಮಿಕ ಶಾಲೆ ಊರಕೇರಿ ಶಾಲಾ ಮಕ್ಕಳಿಗೆ ಸುಬ್ರಾಯ ವಾಳ್ಕೆ ಇವರು ನೀಡಿದ ಬ್ಯಾಗ್, ನೋಟ್ ಬುಕ್, ಜ್ಯಾಮಿಟ್ರಿ ಬಾಕ್ಸ್ ಸೇರಿದಂತೆ ವಿವಿಧ ಬಗೆಯ ಕಲಿಕೋಪಕರಣಗಳನ್ನು ವಾಳ್ಕೆಯವರ ಬೆಂಬಲಿಗರು ಹಸ್ತಾಂತರ ಮಾಡಿದರು.ಈ ಸಂದರ್ಭದಲ್ಲಿ ವಾಲಗಳ್ಳಿ ಪಂಚಾಯತ ಅಧ್ಯಕ್ಷರಾದ ಶ್ರೀ ಪ್ರಕಾಶ ಶ್ಯಾನಭಾಗ, ಸದಸ್ಯರಾದ ಶ್ರೀ ಶ್ರೀಕಾಂತ ಶಾಸ್ತ್ರೀ, ಶಾಲಾ ಅಭಿವೃದ್ಧಿ ಸಮಿತಿಯ ಅಧ್ಯಕ್ಷರಾದ ಶಿವಾನಂದ ಗೌಡ, ಶಾಲೆಯ ಮುಖ್ಯಾಧ್ಯಾಪಕರಾದ ವೀಣಾ ನಾಯ್ಕ,ಸಹ ಶಿಕ್ಷಕರಾದ ರಮಾ ದೇಶಭಂಡಾರಿ ಹಾಗೂ ಡಿ . ಜಿ. ಶಾಸ್ತ್ರೀ, ಶಶಾಂಕ ಶಾಸ್ತ್ರೀ, ಗಣಪು ಗೌಡ ಸೇರಿದಂತೆ ಮಕ್ಕಳ ಪಾಲಕರು ಊರ ನಾಗರಿಕರು ಹಾಜರಿದ್ದರು .

RELATED ARTICLES  ಲಕ್ಷ ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ವಾರಸುದಾರರಿಗೆ ವಾಪಸ್‌ ಮಾಡಿ ಪ್ರಾಮಾಣಿಕತೆ ಮೆರೆದ ಸಾರಿಗೆ ಸಿಬ್ಬಂದಿ.