ಕುಮಟಾದ ಪ್ರತಿಷ್ಠಿತ ಜನತಾ ವಿದ್ಯಾಲಯ ಬಾಡ- ಕಾಗಾಲ ಪ್ರೌಡಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆಯನ್ನು ವಿಶಿಷ್ಟವಾಗಿ ಆಚರಿಸಲಾಯಿತು. ಕಾರ್ಯಕ್ರಮದಲ್ಲಿ ಆಯುರ್ವೇದ ವೈದ್ಯ ಡಾ. ನಾಗರಾಜ್ ಭಟ್ ಮುಖ್ಯ ಅತಿಥಿಗಳಾಗಿ ಆಗಮಿಸಿ ಪರಿಸರದ ಸಂರಕ್ಷಣೆ ಹಾಗೂ ಆರೋಗ್ಯದ ಮಹತ್ವದ ಕುರಿತು ಉಪನ್ಯಾಸ ನೀಡಿದರು. ನಮ್ಮ ಸುತ್ತಮುತ್ತಲಿನ ಪರಿಸರ ಶುಚಿಯಾಗಿದ್ದರೆ ನಮ್ಮ ಆರೋಗ್ಯವೂ ಉತ್ತಮವಾಗಿರುತ್ತದೆ. ಗಿಡಮರಗಳನ್ನು ನೆಟ್ಟು ಅದನ್ನು ಸರಿಯಾಗಿ ಪೋಷಿಸುವುದು ಹಾಗೂ ಸಂರಕ್ಷಿಸುವುದು, ಪ್ಲಾಸ್ಟಿಕ್ ಬಳಕೆಯ ನಿಯಂತ್ರಣ ಹಾಗೂ ಆಹಾರದ ಶುಚಿತ್ವ, ಪ್ರಸ್ತುತ ಸನ್ನಿವೇಶದ ಅಗತ್ಯತೆಯ ಕಾರ್ಯವಾಗಿದೆ ಎಂದರು. ಶಾರೀರಿಕ ಆರೋಗ್ಯ ಹಾಗೂ ಮಾನಸಿಕ ಆರೋಗ್ಯದ ಕುರಿತು ನಿದರ್ಶನಗಳೊಂದಿಗೆ ವಿದ್ಯಾರ್ಥಿಗಳಿಗೆ ತಿಳಿ ಹೇಳಿದರು.
ಹಿರಿಯ ಶಿಕ್ಷಕರಾದ ಶ್ರೀ ಸಿ ಬಿ ಪಿಸ್ಸೆ ಪ್ರಸ್ತಾವಿಕ ಮಾತನಾಡಿ ಅತಿಥಿಗಳನ್ನು ಪರಿಚಯಿಸಿದರು, ಮುಖ್ಯೋಧ್ಯಾಪಕಿ ಶ್ರೀಮತಿ ವೀಣಾ ಅವರು ಅಧ್ಯಕ್ಷತೆ ವಹಿಸಿದ್ದರು. ಶ್ರೀಯುತ ಐವಿ ಭಟ್ ಇವರು ಕಾರ್ಯಕ್ರಮ ನಿರ್ವಹಿಸಿದರು. ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ಸಾಂಕೇತಿಕವಾಗಿ ಗಿಡವನ್ನು ನೀಡಲಾಯಿತು ಎಲ್ಲಾ ಶಿಕ್ಷಕ ವೃಂದದವರು ಸಹಕರಿಸಿದರು.

RELATED ARTICLES  ಆರ್. ವಿ. ದೇಶಪಾಂಡೆಯವರ ಜನ್ಮ ದಿನಾಚರಣೆ :ಜಿಲ್ಲಾ ಕಿಸಾನ ಕಾಂಗ್ರೆಸ್‍ನಿಂದ ರೋಗಿಗಳಿಗೆ ಹಣ್ಣು- ಹಂಪಲು ವಿತರಣೆ.