ಹೊನ್ನಾವರ : ಹೊನ್ನಾವರ ಪಟ್ಟಣದ ಕೆ.ಇ. ಬಿ ಹತ್ತಿರ ಬೈಕ್ ಮತ್ತು ಟಿಪ್ಪರ್ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಯುವಕನೊಬ್ಬ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ . ಮೃತಪಟ್ಟವನನ್ನು ಕರೀಕುರ್ವ ಗ್ರಾಮದ ಹರೀಶ್ ಕೃಷ್ಣ ಮೇಸ್ತ (25) ಎಂದು ಗುರುತಿಸಲಾಗಿದೆ.
ಈತನು ಕುಳಕೋಡ ಹತ್ತಿರದ ವಾಟರ್ ಟ್ಯಾಂಕ್ ನಿರ್ಮಾಣ ಕಾಮಗಾರಿಯಲ್ಲಿ ಕಾರ್ಮಿಕನಾಗಿ ಕೆಲಸ ಮಾಡಿಕೊಂಡಿದ್ದ. ತನ್ನ ಬೈಕ್ ಗೆ ಪೆಟ್ರೋಲ್ ಖಾಲಿಯಾಗಿದ್ದ, ಬೇರೊಬ್ಬರ ಬೈಕ್ ಪಡೆದು ಪೆಟ್ರೋಲ್ ತರಲು ಹೊರಟಾಗ ಈ ಅಪಘಾತಕ್ಕೆ ಬಲಿಯಾಗಿದ್ದಾನೆ. ಟಿಪ್ಪರ್ ಚಾಲಕನ ಅತಿಯಾದ ವೇಗದ ಚಾಲನೆಯೇ ಈ ಅಪಘಾತಕ್ಕೆ ಕಾರಣ ಎಂದು ಹೇಳಲಾಗುತ್ತಿದೆ.