ಕುಮಟಾ : ತಾಲೂಕಿನ ವನ್ನಳ್ಳಿ ಸಮುದ್ರದಲ್ಲಿ ಕಡಲ ವೀಕ್ಷಣೆಗೆ ಬಂದು ಬಂಡೆಯ ಮೇಲೆ ನಿಂತಿದ್ದ ಸಮಯದಲ್ಲಿ ಆಕಸ್ಮಿಕವಾಗಿ ಕಾಲುಜಾರಿ ಸಮುದ್ರಕ್ಕೆ ಬಿದ್ದು ನೀರಿನ ಸೆಳೆತಕ್ಕೆ ಸಿಲುಕಿ ವ್ಯಕ್ತಿಯೋರ್ವ ಸಾವನ್ನಪ್ಪಿದ ಘಟನೆ ನಡೆದಿದೆ.
ಸಾವಿಗೀಡಾದ ವ್ಯಕ್ತಿಯನ್ನು ಜುಬೇರ್ ಎಂದು ಗುರುತಿಸಲಾಗಿದೆ. ಕುಮಟಾದಲ್ಲಿ ಟೈಲ್ಸ್ ಕೆಲಸಕ್ಕೆಂದು ಈತ ಹಾಗೂ ಈತನ ಮೂವರು ಸ್ನೇಹಿತರು ಬೆಳಗಾವಿಯಿಂದ ಬಂದಿದ್ದರು. ಬುಧವಾರ ಮಧ್ಯಾಹ್ನ ನಾಲ್ವರು ಸಮುದ್ರ ಕಿನಾರೆಗೆ ತೆರಳಿದರು. ಅದರಲ್ಲಿ ಜುಬೇರ್ ಬಂಡೆ ಮೇಲೆ ನಿಂತಿದ್ದ ಸಂದರ್ಭದಲ್ಲಿ ಕಾಲುಜಾರಿ ಸಮುದ್ರಕ್ಕೆ ಬಿದ್ದಿದ್ದು ಸಾವನ್ನಪ್ಪಿದ್ದಾನೆ. ಸ್ಥಳೀಯ ಮೀನುಗಾರರು ಆತನ ಶವ ಹೊರತೆಗೆದರು. ಸ್ಥಳಕ್ಕೆ ಕುಮಟಾ ಪೊಲೀಸ್ ಅಧಿಕಾರಿಗಳು ಭೇಟಿನೀಡಿ ಮುಂದಿನ ಕಾರ್ಯಾಚರಣೆ ಕೈಗೊಂಡಿದ್ದಾರೆ.