ಚುನಾವಣೆಯಲ್ಲಿ ಎಲ್ಲರಿಗೂ ಫ್ರೀ ಅಂತ ಹೇಳಿದ್ದ ಕಾಂಗ್ರೆಸ್ ಈಗ ಒಂದೊಂದು ಗ್ಯಾರಂಟಿಗೂ ನೂರೆಂಟು ಕಂಡೀಷನ್ ಹಾಕುತ್ತಿರುವುದಕ್ಕೆ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ “ಬಿಟ್ಟಿ ಭಾಗ್ಯಕ್ಕೆ ದಿನಕ್ಕೊಂದು ಕಂಡೀಷನ್‌ಗಳು” ಎಂಬ ತಲೆಬರಹದ ಪೋಸ್ಟರ್ ಒಂದು ವೈರಲ್ ಆಗುತ್ತಿದ್ದು ಅದರಲ್ಲಿ ಗ್ಯಾರಂಟಿ ಯೋಜನೆಗಳ ಜಾರಿಗಾಗಿ ಸಿದ್ದರಾಮಯ್ಯ ಕಂಡೀಷನ್‌ಗಳ ಪುಸ್ತಕವನ್ನೇ ಬರೆದಿದ್ದಾರೆ ಎಂದು ಟ್ರೋಲ್ ಮಾಡುತ್ತಿದ್ದಾರೆ. ಜೊತೆಗೆ ಉಚಿತವಾಗಿ ವಿದ್ಯುತ್, ಬಸ್ ಪ್ರಯಾಣ , 2000 ರೂಪಾಯಿ ಕೊಡುತ್ತೇವೆ ಎಂದು ಹೇಳಿ ವೋಟ್ ಹಾಕಿಸಿಕೊಂಡು ಜನರನ್ನು ಕೋಡಂಗಿ ಮಾಡಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ದೊಡ್ಡಮಟ್ಟದಲ್ಲಿ ಚರ್ಚೆಯಾಗುತ್ತಿದೆ.
ಅರ್ಜಿ ಸಲ್ಲಿಸುವಾಗಲೇ ಇಷ್ಟೆಲ್ಲಾ ಷರತ್ತು ಹಾಕುತ್ತಿರುವ ಸರ್ಕಾರ ಮುಂದೆ ಅಕೌಂಟ್ಗೆ ಹಣ ಹಾಕೋದೆ ಅನುಮಾನ ಎಂಬುದು ಸಾರ್ವಜನಿಕರ ಅಭಿಪ್ರಾಯ. ಅಧಿಕಾರಕ್ಕೆ ಬಂದ ಹದಿನೈದು ದಿನಗಳಲ್ಲಿಯೇ ಈ ರೀತಿ ಜನಾಕ್ರೋಶಕ್ಕೆ ಒಳಗಾಗಿರುವುದು ಕಾಂಗ್ರೆಸ್‌ಗೆ ತಲೆಬಿಸಿ ತಂದಿದೆ.