ಭಟ್ಕಳ ;ಹತ್ತು ಹಲವು ವಿಭಿನ್ನವಾದ ಕಾರ್ಯಕ್ರಮಗಳನ್ನು ಆಯೋಜಿಸುವ ಮೂಲಕ ಸಾಹಿತ್ಯ ಸಂಸ್ಕøತಿಯ ಕಂಪನ್ನು ಬೀರುತ್ತ ಸಾಹಿತ್ಯ ಪರಿಷತ್ತನ್ನು ಜನರ ಪರಿಷತ್ತನ್ನಾಗಿಸುತ್ತಿರುವ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿನ ಕಾರ್ಯ ಶ್ಲಾಘನೀಯ ಎಂದು ಹಿರಿಯ ಸಾಹಿತಿ ಮಾಸ್ಕೇರಿ ಎಮ್.ಕೆ.ನಾಯಕ ನುಡಿದರು. 20ನೇಯ ಜಿಲ್ಲಾ ಸಾಹಿತ್ಯ ಸಮ್ಮೇಳನಾಧ್ಯಕ್ಷತೆಯ ಗೌರವ ಪಡೆದ ಅವರು ಭಟ್ಕಳಕ್ಕೆ ಆಗಮಿಸಿದ ಸಂದರ್ಭದಲ್ಲಿ ತಾಲೂಕಾ ಸಾಹಿತ್ಯ ಪರಿಷತ್ತು ನೀಡಿದ ಹೃದಯಸ್ಪರ್ಶಿ ಸನ್ಮಾನವನ್ನು ಸ್ವೀಕರಿಸಿ ಮಾತನಾಡುತ್ತಿದ್ದರು.

ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ಕ್ರಿಯಾಶೀಲವಾಗಿ ಕಾರ್ಯವನ್ನು ನಿರ್ವಹಿಸುತ್ತ ಮನೆಯಂಗಳದಲ್ಲಿ ಕಾವ್ಯೋತ್ಸವ, ಮದುವೆ ಚಪ್ಪರದಲ್ಲಿ ಕಾವ್ಯೋತ್ಸವ, ರಥಬೀದಿಯಲ್ಲಿ ಕಾವ್ಯೋತ್ಸವದ ಜೊತೆಗೆ ಹತ್ತು ಹಲವು ವಿಭಿನ್ನ ಕಾರ್ಯಕ್ರಮಗಳನ್ನು ಸಂಘಟಿಸಿ ಪರಿಷತ್ತಿಗೆ ಹೊಸತನದ ಸ್ಪರ್ಶ ನೀಡಿದೆ. ಮನೆಮನೆಯಲ್ಲಿ ಕಾವ್ಯೋತ್ಸವದಂತಹ ಕಾರ್ಯಕ್ರಮಗಳು ಹೆಚ್ಚು ಹೆಚ್ಚು ನಡೆಯುವಂತಾಗಲೆಂದು ನುಡಿದರಲ್ಲದೇ ಅನಿರೀಕ್ಷಿತವಾಗಿ ಪರಿಷತ್ತು ನೀಡಿದ ಸನ್ಮಾನ ಗೌರವ ಸದಾ ಮನಸಲ್ಲಿ ಹಸಿರಾಗಿರುತ್ತದೆ ಎಂದು ಭಾವುಕರಾಗಿ ನುಡಿದರು. ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಕಸಾಪ ಜಿಲ್ಲಾಧ್ಯಕ್ಷ ಅರವಿಂದ ಕರ್ಕಿಕೊಡಿ ಮಾತನಾಡಿ ಮಾಸ್ಕೇರಿ ಎಂಬ ಊರಿನ ಹೆಸರಿಗೆ ತನಗಿಂತಲೂ ಹೆಚ್ಚಿನ ಪ್ರಾಮುಖ್ಯತೆ ನೀಡಿದ ಮಾಸ್ಕೇರಿ ಎಮ್.ಕೆ.ನಾಯಕರವರು ಬಾಲ್ಯದಿಂದಲೂ ಸರ್ವರಿಗು ಸಮಬಾಳು ಸರ್ವರಿಗೂ ಸಮಪಾಲು ಎಂಬ ತತ್ವವನ್ನು ಅಕ್ಷರಶಃ ಪಾಲಿಸುತ್ತ, ಸಾಹಿತ್ಯವನ್ನು ಅಪ್ಪಿಕೊಂಡು ಯಾವುದೇ ನಿರೀಕ್ಷೆಗಳಿಲ್ಲದೇ ಸಾಹಿತ್ಯ ಸೇವೆ ಮಾಡುತ್ತಾ ತನಗಿಂತ ಕಿರಿಯರನ್ನು ಬೆಳೆಸುವುದರಲ್ಲೇ ಸಂತಸಪಟ್ಟವರು ಎಂದರಲ್ಲದೇ ಸದ್ಯದಲ್ಲಿಯೇ ಭಟ್ಕಳ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತಿಗೆ ನೀಡುವ ಸಾಹಿತ್ಯ ಸಾರಥ್ಯ ಪ್ರಶಸ್ತಿ ಪ್ರದಾನ ಕಾರ್ಯಕ್ರಮವನ್ನು ಅದ್ದೂರಿಯಾಗಿ ನಡೆಸಲು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಎಲ್ಲರ ಸಹಕಾರವನ್ನು ಕೋರಿದರು. ಮಾಸ್ಕೇರಿ ಎಮ್.ಕೆ.ನಾಯಕ ಅವರನ್ನು ಭಟ್ಕಳ ಸಾಹಿತ್ಯ ಪರಿಷತ್ ವತಿಯಿಂದ ಸನ್ಮಾನಿಸಲಾಯಿತು.

RELATED ARTICLES  ದಿ.ಜಾನಕಿ ಸಣ್ಣಪ್ಪ ನಾಯಕರಿಗೆ ಭಾವಪೂರ್ಣ ಶೃದ್ಧಾಂಜಲಿ :

ಕಸಾಪ ತಾಲೂಕಾಧ್ಯಕ್ಷ ಗಂಗಾಧರ ನಾಯ್ಕ ಪ್ರಾಸ್ಥಾವಿಕ ಮಾತುಗಳನ್ನಾಡಿ ಮಾಸ್ಕೇರಿಯವರ ಭಾವಗೀತೆಯೊಂದನ್ನು ಹಾಡಿದರು. ಕಸಾಪ ಗೌರವ ಕೋಶಾಧ್ಯಕ್ಷ ಶ್ರೀಧರ ಶೇಟ್ ಎಲ್ಲರನ್ನು ಸ್ವಾಗತಿಸಿ ನಿರ್ವಹಿಸಿದರು. ಗೌರವ ಕಾರ್ಯದರ್ಶಿ ಎಮ್.ಪಿ.ಬಂಢಾರಿ ವಂದಿಸಿದರು. ಇದೇ ಸಂದರ್ಭದಲ್ಲಿ ಮಾಸ್ಕೇರಿಯವರಿಗೆ ಕಸಾಪ ಗೌರವ ಸಲಹೆಗಾರ ಅಂತನಾಯ್ಕ ಉಗ್ರಾಣಿಮನೆ ಕಾಸರಗೋಡು ತಿಮ್ಮಣ್ಣ ನಾಯ್ಕ ಹೊಗೆವಡ್ಡಿ ವೀರಾಂಜನೇಯ ಕ್ಷೇತ್ರದ ಇತಿಹಾಸ ಪರಿಚಯ ಕೃತಿಯನ್ನು ನೀಡಿದರು.

RELATED ARTICLES  ಮಂಗನ‌ ಕಾಯಿಲೆಗೆ ಬಲಿಯಾದವರ ಸಂಖ್ಯೆ 6ಕ್ಕೆ‌ಏರಿಕೆ : ಇಲಾಖಾ ಅಧಿಕಾರಿಗಳ ಸಭೆ

ಕಾರ್ಯಕ್ರಮದಲ್ಲಿ ಕಸಾಪ ಗೌರವ ಸಲಹೆಗಾರರಾದ ಎಮ್.ಆರ್.ನಾಯ್ಕ, ದಿ ನ್ಯೂ ಇಂಗ್ಲೀಷ್ ಪ.ಪೂ.ಕಾಲೇಜಿನ ಪ್ರಾಂಶುಪಾಲ ವೀರೇಂದ್ರ ಶ್ಯಾನಭಾಗ, ಸಾಹಿತಿ ಆರ್.ಎಸ್.ನಾಯಕ,ಗೌರವ ಕಾರ್ಯದರ್ಶಿ ಗಣೇಶ ಯಾಜಿ, ಸಂಘಟನಾ ಕಾರ್ಯದರ್ಶಿ ಪ್ರಕಾಶ ಶಿರಾಲಿ, ಸಂತೋಷ ಆಚಾರ್ಯ, ಸಂಘಸಂಸ್ಥೆ ಪ್ರತಿನಿಧಿ ವೆಂಕಟೇಶ ನಾಯ್ಕ ಆಸರಕೇರಿ, ಎಮ್,ಎಸ್.ನಾಯ್ಕ, ಸಾಹಿತ್ಯ ಪರಿಚಾರಕ ಶಂಕರ ಮುಂಗರವಾಡಿ ದಾಂಡೇಲಿ ಮುಂತಾದವರು ಉಪಸ್ಥಿತರಿದ್ದರು.