ಯಲ್ಲಾಪುರ : ತಾಲೂಕಿನ ಕಿರವತ್ತಿ ಸಮೀಪ ಬೈಕ್ ಸ್ಕಿಡ್ ಆಗಿ ಬಿದ್ದ ಬಳಿಕ ಇಬ್ಬರೂ ಯುವಕರ ಮೇಲೆ ಲಾರಿ ಹಾಯ್ದು ಇಬ್ಬರೂ ಸ್ಥಳದಲ್ಲೆ ಮೃತಪಟ್ಟಿರುವ ಘಟನೆ ನಡೆದಿದೆ. ತಂಬೂರಿನ ಸೂರಜ್ ಪಾಲಂಕರ್ ಹಾಗೂ ಮಂಜುನಾಥ ವೀರಭದ್ರ ಬಡಿಗೇರ ಮೃತ ಯುವಕರಾಗಿದ್ದಾರೆ.
ಇವರಿಬ್ಬರೂ ಕಿರವತ್ತಿಯಿಂದ ಯಲ್ಲಾಪುರಕ್ಕೆ ಪೋಟೋ ಶೂಟ್ ಗೆಂದು ಬಂದಿದ್ದರು ಎನ್ನಲಾಗಿದ್ದು, ಬಳಿಕ ಯಲ್ಲಾಪುರದಿಂದ ಕಿರವತ್ತಿಗೆ ಹೋಗುತ್ತಿದ್ದ ವೇಳೆ ಬೈಕ್ ಸ್ಕಿಡ್ ಆಗಿ ಹೆದ್ದಾರಿಯಲ್ಲಿ ಬಿದ್ದಿದ್ದಾರೆ.
ಈ ವೇಳೆ ಲಾರಿಯೊಂದು ಹೆದ್ದಾರಿಯಲ್ಲಿ ಬಿದ್ದ ಬೈಕ್ ಸವಾರರ ಮೇಲೆ ಹಾದು ಹೋಗಿದೆ. ಇದರಿಂದಾಗಿ ಇಬ್ಬರೂ ಸ್ಥಳದಲ್ಲೇ
ಮೃತಪಟ್ಟಿದ್ದಾರೆ. ಘಟನೆ ಕುರಿತು ಯಲ್ಲಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.