ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ಸನ್ಮಾನ್ಯ ದಿನಕರ ಶೆಟ್ಟಿಯವರು ಇಂದು ಕುಮಟಾದ ಹೊಸ ಬಸ್ ನಿಲ್ದಾಣದಲ್ಲಿ, ರಾಜ್ಯಸರ್ಕಾರದ ‘ಶಕ್ತಿ’ ಯೋಜನೆಗೆ ಚಾಲನೆ ನೀಡಿದರು.

ದೀಪಬೆಳಗುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ ಮಾನ್ಯ ಶಾಸಕರು ಸಾರ್ವಜನಿಕರನ್ನು ಉದ್ದೇಶಿಸಿ ಮಾತನಾಡಿ, ಮಹಿಳೆಯರಿಗೆ ರಾಜ್ಯ ಸಾರಿಗೆ ಸಂಸ್ಥೆಯ ಬಸ್ ಗಳಲ್ಲಿ ಉಚಿತ ಪ್ರಯಾಣ ಸೌಲಭ್ಯವನ್ನು ಒದಗಿಸುವ ನಿಟ್ಟಿನಲ್ಲಿ ರಾಜ್ಯಸರ್ಕಾರವು ‘ಶಕ್ತಿ’ ಯೋಜನೆಯನ್ನು ಜಾರಿಗೆ ತಂದಿದೆ. ಕಾಂಗ್ರೆಸ್ ಪಕ್ಷದ ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ್ದ ಗ್ಯಾರಂಟಿಯಂತೆ ಇಂದಿನಿಂದ ಈ ಯೋಜನೆ ರಾಜ್ಯಾದ್ಯಂತ ಕಾರ್ಯರೂಪಕ್ಕೆ ಬರಲಿದೆ. ಅಂತೆಯೇ ಕ್ಷೇತ್ರದ ಶಾಸಕನಾಗಿ ಈ ಕಾರ್ಯಕ್ರಮವನ್ನು ಉದ್ಘಾಟನೆ ಮಾಡಿದ್ದೇನೆ, ಮಹಿಳೆಯರಿಗೆ ಉಚಿತ ಪ್ರಯಾಣಕ್ಕೆ ಅವಕಾಶ ಒದಗಿಸಿರುವ ರಾಜ್ಯಸರ್ಕಾರಕ್ಕೆ ಅಭಿನಂದನೆಗಳನ್ನು ಸಲ್ಲಿಸುತ್ತೇನೆ. ಮಹಿಳೆಯರು ಇದನ್ನು ಸದ್ಬಳಕೆ ಮಾಡಿಕೊಳ್ಳಬೇಕು. ಅಂತೆಯೇ, NWKRTC ಕುಮಟಾ ಘಟಕಕ್ಕೆ ಸಿಬ್ಬಂದಿಗಳ ಹಾಗೂ ಬಸ್ ಗಳ ಕೊರತೆಯಿದ್ದು, ಸರ್ಕಾರವು ನಮ್ಮ ಬೇಡಿಕೆಗೆ ಸ್ಪಂದಿಸಿ, ಪ್ರಯಾಣಿಕರಿಗೆ ಹಾಗೂ ವಿದ್ಯಾರ್ಥಿಗಳಿಗೆ ನೆರವಾಗಬೇಕು ಎಂದು ಹೇಳಿದರು. ನಂತರ ಹಸಿರು ನಿಶಾನೆ ತೋರಿಸುವ ಮೂಲಕ ಬಸ್ ಪ್ರಯಾಣಕ್ಕೆ ಶುಭಾರಂಭ ಮಾಡಿದರು.

RELATED ARTICLES  ಕುಮಟಾದಲ್ಲಿ ಆಸ್ಪತ್ರೆ ಪಕ್ಕಾ..!

ಕುಮಟಾ ತಹಶಿಲ್ದಾರ್ ಎಸ್. ಎಸ್. ನಾಯಕಲಮಠ, NWKRTC ಕುಮಟಾ ಘಟಕದ ವ್ಯವಸ್ಥಾಪಕ ವೈ. ಕೆ. ಬಾನಾವಳಿಕರ್, ಶಿರಸಿ ವಿಭಾಗದ ಕಾರ್ಮಿಕ ಕಲ್ಯಾಣಾಧಿಕಾರಿ ಪ್ರಕಾಶ್ ನಾಯ್ಕ ವೇದಿಕೆಯಲ್ಲಿ ಇದ್ದರು.

RELATED ARTICLES  ಬೈಕ್ ಅಪಘಾತ : ಸವಾರ ಸಾವು.