ಯಲ್ಲಾಪುರ : ಮಾನಸಿಕ ಖಿನ್ನತೆಗೆ ಒಳಗಾಗಿ, ವಿಪರೀತ ಸಾರಾಯಿಯನ್ನು ಕುಡಿದುಕೊಂಡು ವ್ಯಕ್ತಿಯೊಬ್ಬ ಆತ್ಮಹತ್ಯೆ ಮಾಡಿಕೊಂಡ ಘಟನೆ ಯಲ್ಲಾಪುರ ಪಟ್ಟಣದ ಮಂಜುನಾಥ
ನಗರದಲ್ಲಿ ನಡೆದಿದೆ.
ಹೊಟೇಲ್ ನಲ್ಲಿ ಅಡುಗೆ ಕೆಲಸ ಮಾಡುತ್ತಿದ್ದು, ಮಂಜುನಾಥ ನಗರದ 47 ವರ್ಷದ ವಿನಾಯಕ ನಾರಾಯಣ ನಾಯ್ಕ ಎಂದು ಗುರುತಿಸಲಾಗಿದೆ.
ಯಾವುದೋ ವಿಷಯವನ್ನು ಮನಸ್ಸಿಗೆ ಹಚ್ಚಿಕೊಂಡು ತನ್ನ ಮನೆಯ ಕಟ್ಟಿಗೆ ಇಡುವ ಕೋಣೆಯ ಮುಂದಿನ ಮನೆಯ ಮೇಲ್ಬಾವಣಿಗೆ ನೇಣುಹಾಕಿಕೊಂಡು ಆತ್ಮಹತ್ಯೆ
ಮಾಡಿಕೊಂಡಿದ್ದಾನೆ. ಈ ಕುರಿತಾಗಿ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.