ಭಟ್ಕಳ : ಮನೆಯಲ್ಲಿ ಯಾರೂ ಇಲ್ಲದನ್ನು ಖಚಿತಪಡಿಸಿಕೊಂಡ ಕಳ್ಳರು, ಮನೆಯ ಬಾಗಿಲನ್ನು ಒಡೆದು ಒಳ ಪ್ರವೇಶಿಸಿ ಲಕ್ಷಾಂತರ ರೂ ಮೌಲ್ಯದ ಚಿನ್ನ ಹಾಗೂ ಬೆಳ್ಳಿ
ಆಭರಣಗಳನ್ನು ಕದ್ದು ಪರಾರಿಯಾಗಿರುವ ಘಟನೆ ತಾಲೂಕಿನ ಚಿತ್ರಾಪುರದಲ್ಲಿ ಬೆಳಕಿಗೆ ಬಂದಿದೆ.
ತಾಲೂಕಿನ ಚಿತ್ರಾಪುರ ಸಾರಸ್ವತ ಕಾಲನಿಯ ನಿವಾಸಿ ಮಹೇಶ ಪಂಡಿತ ಎಂಬುವವರ ಮನೆ ಇದಾಗಿದ್ದು, ಜೂನ್ 8 ರಂದು ಕುಟುಂಬ ಸಮೇತರಾಗಿ ಮುಂಬೈಗೆ ಪ್ರಯಾಣ ಬೆಳೆಸಿದ್ದರು. ಪಕ್ಕದ ಮನೆಯವರು ಮನೆಯ ಬಾಗಿಲ ತೆರೆದಿರುವುದನ್ನು ನೋಡಿ ಅಲ್ಲಿಗೆ ತೆರಳಿದ್ದು ಕಳ್ಳತನದ ಘಟನೆ ಕಂಡುಬಂದಿದೆ.
ಮನೆಯಲ್ಲಿದ್ದ ಸುಮಾರು 539 ಗ್ರಾಂ ಚಿನ್ನ, 8 ಕೆ.ಜಿ. ಬೆಳ್ಳಿ ಆಭರಣಗಳು ಕಳ್ಳತನವಾಗಿದ್ದು, ಕಳುವಾದ ಸ್ವತ್ತಿನ ಮೌಲ್ಯ ರೂ.14 ಲಕ್ಷಕ್ಕೂ
ಅಧಿಕ ಎಂದು ಅಂದಾಜಿಸಲಾಗಿದೆ. ಕಾರವಾರದಿಂದ ಶ್ವಾನದಳ ಹಾಗೂ
ಬೆರಳಚ್ಚು ತಜ್ಞರು ಆಗಮಿಸಿ ಪರಿಶೀಲಿಸಿದ್ದಾರೆ.