ಹೊನ್ನಾವರ ತಾಲೂಕಿನ ಕವಲಕ್ಕಿ ಗ್ರಾಮದಲ್ಲಿ ಸ್ಟೇಷನರಿ ಮತ್ತು ತಂಪು ಪಾನೀಯ ಅಂಗಡಿಗೆ ಬೆಂಕಿ ತಗುಲಿ ಲಕ್ಷಾಂತರ ರೂಪಾಯಿ ಹಾನಿಯಾಗಿದೆ. ನಡೆದ ಬೆಂಕಿ ಅವಘಡದಿಂದ ಅಂಗಡಿ ಸಂಪೂರ್ಣ ಸುಟ್ಟು ಕರಕಲಾಗಿದೆ.
ರವಿವಾರ ಮಧ್ಯರಾತ್ರಿ 12 ಗಂಟೆಗೆ ಸುಮಾರಿಗೆ ಈ ಘಟನೆ ನಡೆದಿದ್ದು, ಹಿರಿಯ ವರ್ತಕರಾದ ಕವಲಕ್ಕಿಯ ಎನ್. ಎಸ್.ಭಂಡಾರಿ ಎಂಬುವವರಿಗೆ ಸೇರಿದ ಅಂಗಡಿ ಇದಾಗಿದೆ.
ಈ ಅವಘಡದಲ್ಲಿ 5ಕ್ಕಿಂತ ಹೆಚ್ಚು ಫ್ರಿಜ್ ಯಂತ್ರೋಪಕರಣ ,ಸ್ಟೇಷನರಿ ಸಾಮಗ್ರಿಗಳು ಬೆಂಕಿಯ ಆಹುತಿಯಾಗಿದೆ . ಅಂದಾಜು 50 ಲಕ್ಷಕ್ಕೂ ಅಧಿಕ ಹಾನಿ ಉಂಟಾಗಿದೆ.
ಅಂಗಡಿಯಲ್ಲಿದ್ದ ಫ್ರೀಜ್, ಸ್ಟೇಷನರಿ ಸಾಮಗ್ರಿಗಳು ಸಂಪೂರ್ಣ ಸುಟ್ಟು ಕರಕಲಾಗಿದ್ದು, ಅಂಗಡಿ ಮಾಲೀಕರು
ಪರಿಹಾರಕ್ಕಾಗಿ ಒತ್ತಾಯಿಸಿದ್ದಾರೆ.
ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಬೆಂಕಿ ಬಿದ್ದಿರಬಹುದು ಅಂದಾಜಿಸಲಾಗಿದೆ . ಸ್ಥಳಕ್ಕೆ ಆಗಿಮಿಸಿದ ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.