ಹಳಿಯಾಳ : ದಕ್ಷಿಣ ಕೋರಿಯಾದಲ್ಲಿ ಆಯೋಜನೆಗೊಂಡಿದ್ದ ಕಿರಿಯರ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್ ಶಿಪ್‌ನಲ್ಲಿ
ಭಾರತವನ್ನು ಪ್ರತಿನಿಧಿಸಿದ್ದ ಹಳಿಯಾಳ ತಾಲೂಕಿನ ಬೆಳವಟಗಿ ಗ್ರಾಮದ ಕ್ರೀಡಾ ಪ್ರತಿಭೆ ಶಿವಾಜಿ ಪರಶುರಾಮ ಮಾದಪ್ಪಗೌಡ ದೇಶಕ್ಕೆ ಕೀರ್ತಿ ತಂದಿದ್ದಾರೆ.
ಪುರುಷರ 5000 ಮೀ ಓಟದಲ್ಲಿ ದ್ವಿತೀಯ
ಸ್ಥಾನ ಪಡೆದು ಬೆಳ್ಳಿ ಪದಕವನ್ನು ತನ್ನದಾಗಿಸಿಕೊಳ್ಳುವ ಮೂಲಕ ತಾಲ್ಲೂಕು, ಜಿಲ್ಲೆ, ರಾಜ್ಯ ಹಾಗೂ ದೇಶಕ್ಕೆ ಕೀರ್ತಿಯನ್ನು ತಂದಿದ್ದಾರೆ.
ಹಳಿಯಾಳ ತಾಲ್ಲೂಕಿನ ಬೆಳವಟಗಿ ಗ್ರಾಮದ ಕೃಷಿ ಕುಟುಂಬದ ಪ್ರತಿಭಾವಂತ ಯುವ ಕ್ರೀಡಾಪಟುವಾಗಿರುವ ಶಿವಾಜಿ ಪರಶುರಾಮ ಮಾದಪ್ಪಗೌಡ ಪ್ರಸಕ್ತ ಬೆಂಗಳೂರಿನ
ಡಿವೈಇಎಸ್ ಸ್ಪೋರ್ಟ್ಸ್ ಹಾಸ್ಟೆಲ್‌ನಲ್ಲಿ ಡಿಗ್ರಿ ವ್ಯಾಸಂಗ ಮಾಡುತ್ತಿದ್ದಾರೆ ಎಂದು ವರದಿಯಾಗಿದೆ.