ಕುಮಟಾ : ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜ್ಯುಕೇಶನ ಟ್ರಸ್ಟನ ಬಿ.ಕೆ. ಭಂಡಾರರ‍್ಸ್ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗಾಗಿ ವಿಧಾತ್ರಿ ಅವಾರ್ಡ ಕಾರ್ಯಕ್ರಮ ಜರುಗಿತು .ಈ ಸಂದರ್ಭದಲ್ಲಿ ವಿಧಾತ್ರಿಯ ಸಹಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಹಾಗೂ ಕೊಂಕಣ ಸಂಸ್ಥೆಯ ಶೈಕ್ಷಣ ಕ ಸಲಹೆಗಾರರಾದ ಆರ್.ಎಚ್. ದೇಶಭಂಢಾರಿಯವರು ಉಪಸ್ಥಿತರಿದ್ದು, ವಿದ್ಯಾರ್ಥಿಗಳ ಸಾಧನೆಗೆ ಶ್ಲಾಘನೆಯನ್ನು ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ಪ್ರತಿಯೊಬ್ಬ ವಿದ್ಯಾರ್ಥಿಗಳನ್ನು ಅಭಿನಂದಿಸಲಾಯಿತು.

RELATED ARTICLES  ಸಂಸ್ಕಾರಯುತ ಶಿಕ್ಷಣ ಬದುಕನ್ನು ಬೆಳಗಬಲ್ಲದು- ಶ್ರೀವಲ್ಲಿ ಸಾಹಿತ್ಯ ಕಾರ್ಯಾಗಾರದಲ್ಲಿ ಉಮೇಶ ಮುಂಡಳ್ಳಿ ಅಭಿಮತ

ಈ ಯಶಸ್ವಿ ಫಲಿತಾಂಶದ ರುವಾರಿಗಳಾದ ಉಪನ್ಯಾಸಕ ವೃಂದದವರನ್ನು , ಭೋಧಕೇತರ ಸಿಬ್ಬಂದಿಗಳನ್ನು ಅಭಿನಂದಿಸಲಾಯಿತು. ಪ್ರಾಚಾರ್ಯರಾದ ಕಿರಣ ಭಟ್ಟ , ಉಪಪ್ರಾಚಾರ್ಯರಾದ ಸುಜಾತಾ ಹೆಗಡೆ ಒಳಗೊಂಡಂತೆ ಎಲ್ಲಾ ಉಪನ್ಯಾಸಕರು ಹಾಜರಿದ್ದರು . ವಿದ್ಯಾರ್ಥಿಗಳಿಂದ ಮನರಂಜನೆ ಕಾರ್ಯಕ್ರಮ ಆಯೋಜಿಸಲಾಯಿತು.
ಉಪನ್ಯಾಸಕರಾದ ಚಿದಾನಂದ ಭಂಢಾರಿ ಪ್ರಾಸ್ತಾವಿಕದೊಂದಿಗೆ ಸ್ವಾಗತಿಸಿದರು. ಇನ್ನೋರ್ವ ಉಪನ್ಯಾಸಕರಾದ ಪದ್ಮನಾಭ ಪ್ರಭು ವಂದನಾರ್ಪಣೆ ಗೈದರು.

RELATED ARTICLES  ನಾಳೆ ಉತ್ತರಕನ್ನಡದಲ್ಲಿ ಸೆಕ್ಷನ್ 144 ಜಾರಿ.