ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿರುವ ದಿನಕರ ಶೆಟ್ಟಿಯವರು ಕುಮಟಾದ ಹೆಡ್ ಪೋಸ್ಟ್ ಆಫೀಸ್ ರಸ್ತೆಯಲ್ಲಿ ನೂತನವಾಗಿ ನಿರ್ಮಾಣವಾಗಿರುವ ಜಯಶ್ರೀ ಎಂಟರ್ಪ್ರೈಸಸ್ ಬಿಲ್ಡಿಂಗ್ ಮಟೀರಿಯಲ್ಸ್ ಮಳಿಗೆಯನ್ನು ಉದ್ಘಾಟನೆ ಮಾಡಿದರು. ವಿಜಯೇಂದ್ರ ಕುಮಾರ ಬಿಳಗಿ ಅವರ ಒಡೆತನದ ಮಳಿಗೆ ಇದಾಗಿದ್ದು, ಕಟ್ಟಡ ನಿರ್ಮಾಣಕ್ಕೆ ಬೇಕಿರುವ ಅತ್ಯಾಧುನಿಕ ಸಾಮಗ್ರಿಗಳು ಇಲ್ಲಿ ಲಭ್ಯವಿರಲಿವೆ.
ಉದ್ಘಾಟನಾ ಸಮಾರಂಭವನ್ನು ಉದ್ದೇಶಿಸಿ ಮಾತನಾಡಿದ ಮಾನ್ಯ ದಿನಕರ ಶೆಟ್ಟಿಯವರು, ವಿಜಯೇಂದ್ರ ಬಿಳಗಿ ಅವರು ಒಬ್ಬ ಉತ್ಸಾಹಿ ಯುವಕರಾಗಿದ್ದು, ಒಬ್ಬ ಯಶಸ್ವಿ ಉದ್ಯಮಿಯಾಗುವುದರಲ್ಲಿ ಯಾವುದೇ ಸಂಶಯವಿಲ್ಲ. ಕುಮಟಾದಲ್ಲಿ ಇದುವರೆಗೆ ಯಾರೂ ಪರಿಚಯಿಸದಿರುವ ಗೃಹನಿರ್ಮಾಣ ಸಾಮಗ್ರಿಗಳ ಮಳಿಗೆಯನ್ನು ಬಿಳಗಿಯವರು ಇಂದು ಆರಂಭಿಸಿದ್ದಾರೆ. WPC ವಾಲ್ ಪ್ಯಾನಲ್, ಪಿವಿಸಿ ವಾಲ್ ಸೀಲಿಂಗ್, ಲೈಟ್ ವೇಟ್ ಮೇಲ್ಚಾವಣಿ ಸಿಸ್ಟಮ್ ಸೇರಿದಂತೆ ಇನ್ನೂ ಹಲವು ಪರಿಕರಗಳು ಇಲ್ಲಿ ಸಿಗುತ್ತಿರುವುದು ವಿಶೇಷ. ನಮ್ಮ ಕರಾವಳಿ ಹಾಗೂ ಮಲೆನಾಡಿನ ಹವಾಮಾನಕ್ಕೆ ಅನುಕೂಲ ಆಗಲಿರುವ ತಂತ್ರಜ್ಞಾನವನ್ನು ಒಳಗೊಂಡಿರುವ ಉಪಕರಣಗಳಿಗೆ ವಿಶೇಷ ಬೇಡಿಕೆ ಬರುವುದರಲ್ಲಿ ಸಂದೇಹವಿಲ್ಲ. ವಿಜಯೇಂದ್ರ ಬಿಳಗಿಯವರ ಪ್ರಯತ್ನ ಯಶಸ್ವಿಯಾಗಲಿ ಎಂದು ಶುಭಕೋರಿದರು.
ಉದ್ಯಮಿ ಶ್ರೀ ಜಿ. ಪಿ. ಬಿಳಗಿ ಅವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಕೆ. ಡಿ. ಸಿ. ಸಿ. ನಿರ್ದೇಶಕ ಶ್ರೀ ಶಿವಾನಂದ ಹೆಗಡೆ, ಬೆನಕ ಕನ್ಸಲ್ಟನ್ಸಿಯ ಮಾಲೀಕ ಶ್ರೀ ಎಚ್. ಎನ್. ನಾಯ್ಕ್, ಕುಮಟಾ ಮಂಡಲ ಬಿಜೆಪಿ ಅಧ್ಯಕ್ಷ ಶ್ರೀ ಹೇಮಂತಕುಮಾರ ಗಾಂವಕರ, ಯುನಿಕ್ಯೂ ಕನ್ಸಲ್ಟನ್ಸಿಯ ಮಾಲೀಕ ಶ್ರೀ ಶ್ರೀನಿವಾಸ ನಾಯ್ಕ ವೇದಿಕೆಯಲ್ಲಿ ಇದ್ದರು.