ಅಂಕೋಲಾ : ತಾಲೂಕಿನ ಹೊನ್ನಳ್ಳಿ ಗ್ರಾಮದ ವೃಕ್ಷಮಾತೆ ಎಂದೇ ಪ್ರಸಿದ್ಧಿ ಪಡೆದಿರುವ ಪದ್ಮಶ್ರೀ ತುಳಸಿಗೌಡ ಹಾಗೂ ಧಾರವಾಡ ಜಿಲ್ಲೆ ಅಣ್ಣಿಗೇರಿಯ ಕೃಷಿ ಯಂತ್ರೋಪಕರಣಗಳ ತಯಾರಕ ಪದ್ಮಶ್ರೀ ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ ಧಾರವಾಡದ ಕರ್ನಾಟಕ ಕೃಷಿ ವಿಶ್ವವಿದ್ಯಾಲಯವು ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿ ಗೌರವಿಸಿದೆ ಎಂದು ತಿಳಿದುಬಂದಿದೆ.
ವೃಕ್ಷಮಾತೆ ತುಳಸಿಗೌಡ ಹಾಗೂ ಅಬ್ದುಲ್ ಖಾದರ್ ನಡಕಟ್ಟಿನ ಅವರಿಗೆ ಪದ್ಮಶ್ರೀ ಪ್ರಶಸ್ತಿ ಕೂಡ ಲಭಿಸಿದೆ. ತುಳಸಿಗೌಡಬಅವರ ಪರಿಸರ ಕಾಳಜಿ ಹಾಗೂ ಕೃಷಿ ಕ್ಷೇತ್ರದಲ್ಲಿ ಹೊಸ ಹೊಸ ಯಂತ್ರೋಪಕರಣಗಳ ಆವಿಷ್ಕಾರ ಮಾಡಿದ ನಡಕಟ್ಟಿನ ಅವರ ಸೇವೆಯನ್ನು ಪರಿಗಣಿಸಿ ಕೃಷಿ ವಿವಿ ಇಬ್ಬರಿಗೂ ಗೌರವ ಡಾಕ್ಟರೇಟ್ ಪದವಿ ಪ್ರದಾನ ಮಾಡಿದೆ.
ಕೃಷಿ ವಿಶ್ವವಿದ್ಯಾಲಯದ ರೈತರ ಜ್ಞಾನಾಭಿವೃದ್ಧಿ ಕೇಂದ್ರದಲ್ಲಿ ನಡೆದ 36ನೇ ಘಟಿಕೋತ್ಸವದಲ್ಲಿ ಇಬ್ಬರಿಗೂ ರಾಜ್ಯಪಾಲ ಥಾವರ್ ಚಂದ್ ಗೆಹೋಟ್ ಹಾಗೂ ಕೃಷಿ ಸಚಿವ ಎನ್.ಚೆಲುವರಾಯಸ್ವಾಮಿ ಗೌರವ ಡಾಕ್ಟರೇಟ್ ಪ್ರದಾನ ಮಾಡಿ ಗೌರವಿಸಿದರು ಎಂದು ವರದಿಯಾಗಿದೆ.