ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜುಕೇಶನ್ ಟ್ರಸ್ಟ್ ನ ಬಿ. ಕೆ. ಭಂಡಾರಕರ್ಸ ಸರಸ್ವತಿ ಪದವಿ ಪೂರ್ವ ಕಾಲೇಜಿನ ದ್ವಿತೀಯ ಪಿಯುಸಿ ವಿಜ್ಞಾನ ವಿಭಾಗದಲ್ಲಿ ವ್ಯಾಸಾಂಗ ಮಾಡುತ್ತಿರುವ ವಿದ್ಯಾರ್ಥಿಗಳು NEET – 2023 ರಲ್ಲಿ ಉತ್ತಮ ಗುಣಮಟ್ಟದ ಸಾಧನೆಯನ್ನು ಮಾಡಿ ಸಂಸ್ಥೆಯ ಗರಿಮೆಯನ್ನು ಹೆಚ್ಚಿಸಿದ್ದಾರೆ.

ಕು. ಶ್ರೀನಂದಾ ದಿಂಡೆ ಕಾಲೇಜಿಗೆ ಪ್ರಥಮಳಾಗಿ ಹೊರಹೊಮ್ಮಿದ್ದು ಜೊತೆಗೆ ಕು. ಪ್ರಾಪ್ತಿ ನಾಯಕ್, ಕು. ಸಾತ್ವಿಕ ಭಟ್ಟ, ಕು. ಶ್ರೀಜನಿ ಭಟ್, ಕು. ರಂಜನಾ ಮಡಿವಾಳ, ಕು. ಪ್ರತಿಷ್ಠಾ ಬಿಲ್ಲವ, ಕು. ಶ್ರೇಯಸ್ ಪೈ, ಕು. ರಾಹುಲ ಆರ್ ಶಾನಭಾಗ, ಕು. ಪೂರ್ವ ನಾಯ್ಕ, ಕು. ಸಿಂಧು ಎಮ್., ಕು. ಸ್ನೇಹಾ ಬಿ. ಆರ್. ಇವರುಗಳು ಇತ್ತೀಚಿಗೆ ವೈದ್ಯಕೀಯ ಶಿಕ್ಷಣ ಪದವಿಗಾಗಿ ನಡೆದ ರಾಷ್ಟ್ರ ಮಟ್ಟದ NEET-2023 ಪರೀಕ್ಷೆಯಲ್ಲಿ ಉತ್ತಮ ಅಂಕಗಳಿಸಿ, ವೈದ್ಯಕೀಯ ಶಿಕ್ಷಣ ಪದವಿಯ ಪ್ರವೇಶಕ್ಕೆ ಅರ್ಹತೆಯನ್ನು ಪಡೆದು ಕಾಲೇಜಿಗೆ ಕೀರ್ತಿಯನ್ನು ತಂದುಕೊಟ್ಟಿದ್ದಾರೆ.

RELATED ARTICLES  ಬ್ಲೇಡಿನಿಂದ ಕುತ್ತಿಗೆ ಕೊಯ್ದುಕೊಂಡು ಆತ್ಮಹತ್ಯೆಗೆ ಶರಣಾದ ವಿವಾಹಿತ

ಕೊಂಕಣ ಎಜುಕೇಶನ್ ಟ್ರಸ್ಟ್ ನ ಪದಾಧಿಕಾರಿಗಳು, ವಿಧಾತ್ರಿ ಅಕಾಡೆಮಿಯ ಸಹಸಂಸ್ಥಾಪಕರಾದ ಶ್ರೀ ಗುರುರಾಜ ಶೆಟ್ಟಿಯವರು, ಪ್ರಾಂಶುಪಾಲರಾದ ಶ್ರೀ ಕಿರಣ ಭಟ್ಟರವರು ಹಾಗೂ ಉಪನ್ಯಾಸಕ ವರ್ಗದವರು ವಿದ್ಯಾರ್ಥಿಗಳ ಈ ಸಾಧನೆಗೆ ಹರ್ಷವನ್ನು ವ್ಯಕ್ತಪಡಿಸಿ ವಿದ್ಯಾರ್ಥಿಗಳ ಮುಂದಿನ ಭವಿಷ್ಯಕ್ಕೆ ಶುಭ ಹಾರೈಸಿದ್ದಾರೆ.

RELATED ARTICLES  25 ರ ವರೆಗೂ ಮಳೆಯ ಆರ್ಭಟ ಸಾಧ್ಯತೆ : ಉತ್ತರ ಕನ್ನಡದಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಲು ಸೂಚನೆ.