ಮುಂಡಗೋಡ: ತಾಲೂಕಿನ ಆಲಳ್ಳಿ ಗ್ರಾಮದಲ್ಲಿ ಗದ್ದೆಯ ಕೆಲಸ ಮುಗಿಸಿಕೊಂಡು ಮನೆಗೆ ಬರುವಾಗ ಕರಡಿಗಳು ರೈತನ ಮೇಲೆ ದಾಳಿ ನಡೆಸಿದ ಪರಿಣಾಮ ಗಾಯಗೊಂಡಿರುವ ಘಟನೆ ನಡೆದಿದೆ. ಶೇಖಪ್ಪ ಲಿಂಗಪ್ಪ ಗೌರಕ್ಕನವರ ಎಂಬಾತ ಕರಡಿ ದಾಳಿಯಿಂದ ಗಾಯಗೊಂಡಿದ್ದಾನೆ.

RELATED ARTICLES  ಒಂಟಿ ಮಹಿಳೆಯ ಬಳಿ ದಾರಿ ಕೇಳುವ ನೆಪದಲ್ಲಿ ಬಂಗಾರದ ಸರ ದೋಚಿ ಪರಾರಿ.

ಆಲಳ್ಳಿ ಗ್ರಾಮದ ಸನಿಹ ಇರುವ ಹೊಲದಲ್ಲಿ ಕೆಲಸ ಮುಗಿಸಿ ರಾತ್ರಿ ಮನೆಗೆ ಮರುಳುತ್ತಿದ್ದಾಗ ಪಕ್ಕದ ಅರಣ್ಯದಿಂದ ಬಂದ ಎರಡು ಕರಡಿಗಳು ಏಕಾಏಕಿ ರೈತನ ಮೇಲೆ ದಾಳಿ ನಡೆಸಿವೆ.

RELATED ARTICLES  ನಾಮಪತ್ರ ಸಲ್ಲಿಸಿದ ಶಾರದಾ ಮೋಹನ ಶೆಟ್ಟಿ: ಅಪಾರ ಬೆಂಬಲಿಗರ ಉಪಸ್ಥಿತಿ.

ಶೇಖಪ್ಪ ಚೀರಾಡುತ್ತಿದ್ದಂತೆ ಸುತ್ತಮುತ್ತಲಿನ ಗ್ರಾಮಸ್ಥರು ಸ್ಥಳಕ್ಕೆ ಬಂದಿರುವುದನ್ನು ನೋಡಿ ಕರಡಿಗಳು ಓಡಿ ಹೋದವು. ರೈತ ಶೇಖಪ್ಪನ ಮೈಮೇಲೆ ತಿರುಚಿದ ಗಾಯಗಳಾಗಿವೆ. ನಂತರ ಆತನನ್ನು ಹತ್ತಿರದ ಆಸ್ಪತ್ರೆಗೆ ದಾಖಲು ಮಾಡಲಾಗಿದೆ.