ಕುಮಟಾ : ಪಟ್ಟಣದ ಎಲ್‌ಐಸಿ ಕಚೇರಿ ಸಮೀಪದ ರಾಷ್ಟ್ರೀಯ ಹೆದ್ದಾರಿ ೬೬ರಲ್ಲಿ ಲಾರಿಯೊಂದ ಸ್ಕೂಟರ್‌ಗೆ ಡಿಕ್ಕಿ ಹೊಡೆದ ಪರಿಣಾಮ ಸ್ಕೂಟರ್ ಚಲಾಯಿಸುತ್ತಿದ್ದ ಕಲಭಾಗ ಗಾಮ ಪಂಚಾಯತ್ ಅಧ್ಯಕ್ಷೆ ಗಂಭೀರವಾಗಿ ಗಾಯಗೊಂಡಿದ್ದಾಳೆ. ಪಟ್ಟಣದ ಅದಂಡೆ ನಿವಾಸಿ ಮತ್ತು ಕಲಭಾಗ ಗಾಮ ಪಂಚಾಯತ್ ಅಧ್ಯಕ್ಷೆ ಗೀತಾ ಜೈವಿಠಲ್ ಕುಬಾಲ್ (48) ಗಂಭೀರ ಗಾಯಗೊಂಡವರು.

RELATED ARTICLES  ಶ್ರೀ ರಾಘವೇಂದ್ರ ಅಷ್ಟಾಕ್ಷರ ಸ್ತೋತ್ರಂ

ಅವರು ತಮ್ಮ ಸ್ಕೂಟರ್ ಮೇಲೆ ಗಿಬ್ ಸರ್ಕಲ್ ಕಡೆಯಿಂದ ಎಲ್‌ಐಸಿ ಕಚೇರಿ ಎದುರಿನ ಮಹಾಲಕ್ಷ್ಮಿ ಕಂಫರ್ಟಗೆ ತೆರಳಲು ಹೆದ್ದಾರಿಯಲ್ಲಿ ಕ್ರಾಸ್ ಮಾಡುತ್ತಿರುವಾಗ ಹಿಂಬದಿಯಿಂದ ವೇಗವಾಗಿ ಬಂದ ಲಾರಿ ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ಅಪಘಾತದ ರಭಸಕ್ಕೆ ಗೀತಾ ಅವರ ಶಿರ ಭಾಗಕ್ಕೆ ಗಂಭೀರ ಪೆಟ್ಟು ತಗಲಿ ಅಧಿಕ ರಕ್ತಸ್ರಾವ ಉಂಟಾಗಿದೆ. ತಕ್ಷಣ ಗಾಯಾಳುವನ್ನು ಸರ್ಕಾರಿ ಆಸ್ಪತ್ರೆಗೆ ಸಾಗಿಸಿ ಪ್ರಥಮ ಚಿಕಿತ್ಸೆ ಕೊಡಿಸಿ ಹೆಚ್ಚಿನ ಚಿಕಿತ್ಸೆಗಾಗಿ ಮಣಿಪಾಲ್ ಆಸ್ಪತ್ರೆಗೆ
ಸಾಗಿಸಲಾಗಿದೆ. ಈ ಬಗ್ಗೆ ಕುಮಟಾ ಪೊಲೀಸ್
ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

RELATED ARTICLES  ದಕ್ಷಿಣಕನ್ನಡ ಜಿಲ್ಲೆಗೆ ಆಗಮಿಸಿದ ಪ್ರಮೋದ್ ಮುತಾಲಿಕ್ ಪೊಲೀಸ್ ವಶಕ್ಕೆ.