ಕುಮಟಾ : ಹಳದಿಪುರ ಸಮೀಪದ ಅಪ್ಪೇಕೇರಿಯ ಯುವಕ ಮಾರುತಿ ಮಾಸ್ತಿ ಗೌಡ ಅವರು ಹಳದಿಪುರ ರಕ್ತದಾನಿ ಬಳಗದ ಸದಸ್ಯರೊಡಗೂಡಿ ಕುಮಟಾದ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಗೆ ಭೇಟಿ ನೀಡಿ ‘ನೇತ್ರದಾನ’ಕ್ಕೆ ನೊಂದಾಯಿಸಿಕೊಂಡರು ಹಾಗೂ ಕಣ್ಣುಪೊರೆ ಶಸ್ತ್ರಚಿಕಿತ್ಸೆ ಗೆ ದಾಖಲಾದ ಹಿರಿಯರಿಗೆ ಹಣ್ಣುಗಳ ವಿತರಿಸಿ ಅವರ ಆಶೀರ್ವಾದ ಪಡೆದು ತನ್ನ 30 ನೇ ಜನುಮ ದಿನವನ್ನು ಆಚರಿಸಿಕೊಂಡರು.

RELATED ARTICLES  ಭಟ್ಕಳ: ಜಿ.ಎಸ್.ಬಿ ವಾರ್ಷಿಕೋತ್ಸವ ೨೦೨೩

ಈ ಸಂದರ್ಭದಲ್ಲಿ ಪಾಲ್ಗೊಂಡ ಆಸ್ಪತ್ರೆಯ ಟ್ರಸ್ಟ್ ನ ಸಂಸ್ಥಾಪಕ ಅಧ್ಯಕ್ಷ ಟ್ರಸ್ಟಿ ಡಾ.ಸಿ.ಎಸ್. ವೇರ್ಣೆಕರ ರವರು ಮಾತನಾಡಿ ಮಾರುತಿ ಮಾಸ್ತಿ ಗೌಡ ಅವರ ಈ ಆದರ್ಶ ನಡೆಯ ಕುರಿತು ಹರ್ಷ ವ್ಯಕ್ತಪಡಿಸಿ ಟ್ರಸ್ಟ್ ವತಿಯಿಂದ ಅವರಿಗೆ ಹುಟ್ಟು ಹಬ್ಬದ ಶುಭಾಶಯ ಕೋರಿದರು.
ರಕ್ತದಾನಿ ಬಳಗದ ಮಂಜುನಾಥ ಗೋಳಿಬೀರ ಗೌಡ,ಅನಂತ ಗಣಪು ಗೌಡ,ದೇವೇಂದ್ರ ವಿಷ್ಣು ಗೌಡ ಹಾಗೂ ನೇತ್ರತಜ್ಙ ಡಾ.ಮಲ್ಲಿಕಾರ್ಜುನ,
ಆಡಳಿತಾಧಿಕಾರಿ ಜಯದೇವ ಬಳಗಂಡಿ ಹಾಗೂ ಸಿಬ್ಬಂದಿಗಳು ಉಪಸ್ಥಿತರಿದ್ದು ಶುಭಕೋರಿದರು.

RELATED ARTICLES  ಹಿರೇಗುತ್ತಿ ಹೈಸ್ಕೂಲ್ ವಿದ್ಯಾರ್ಥಿಗಳಿಗೆ “ಚಿಣ್ಣರ ವನ ದರ್ಶನ” ಕಾರ್ಯಕ್ರಮ

ಪ್ರತಿ ತಿಂಗಳಿನಂತೆ ತಿಂಗಳಿನ 3 ನೇಯ ಗುರುವಾರ ಗೋಕರ್ಣ ಮತ್ತು ಅಂಕೋಲಾದಲ್ಲಿ ನಡೆದ ಉಚಿತ ಕ್ಯಾಂಪನಲ್ಲಿ ಕಣ್ಣುಪೊರೆ ಶಸ್ತ್ರಚಿಕಿತ್ಸೆ ಅವಶ್ಯವುಳ್ಳ ಅಂತೂ 17 ಅರ್ಹ ವೃದ್ಧರನ್ನು ಉಚಿತ ಶಸ್ತ್ರಚಿಕಿತ್ಸೆ ಗಾಗಿ ಕುಮಟಾದಲ್ಲಿನ ಲಯನ್ಸ್ ರೇವಣಕರ ಚೆರಿಟೇಬಲ್ ಕಣ್ಣಿನ ಆಸ್ಪತ್ರೆಗೆ ಕರೆತಂದು ದಾಖಲಿಸಲಾಗಿತ್ತು.