ಶಿರಸಿ: ಬಾವಿಯಲ್ಲಿ ನೀರು ಎಷ್ಟಿದೆ ಎಂದು ಬಗ್ಗೆ ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ಬಾವಿಗೆ ಬಿದ್ದು ವ್ಯಕ್ತಿಯೋರ್ವ ಸಾವು ಕಂಡ ಘಟನೆ ತಾಲೂಕಿನ ಕೆಳಗಿನ ಓಣಿಕೇರಿಯ ಸಮೀಪದ ಕೆಂಗ್ರೆಯಲ್ಲಿ ಸಂಭವಿಸಿದೆ.
ನಾರಾಯಣ ವೆಂಕಟರಮಣ ಗೌಡ 39 ವರ್ಷ
ಎಂದು ಗುರುತಿಸಲಾಗಿದೆ.
ಮಳೆ ಬರುತ್ತಿದ್ದ ಹಿನ್ನೆಲೆಯಲ್ಲಿ ಬಾವಿಯಲ್ಲಿ ನೀರು ಮೇಲೇರುತ್ತಿದೆಯೇ ಎಂದು ನೋಡಲು ಹಿತ್ತಲಿನ ಬಾವಿಯ ಹತ್ತಿರ ಹೋಗಿದ್ದ, ಬಾವಿಯಲ್ಲಿ ಇಣುಕಿ ನೋಡುವಾಗ ಅಕಸ್ಮಾತ್ತಾಗಿ ಕಾಲು ಜಾರಿ ಬಿದ್ದು ಸಾವು ಕಂಡಿದ್ದಾನೆ ಎನ್ನಲಾಗಿದೆ.
ಈ ಕುರಿತಾಗಿ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ
ಪ್ರಕರಣ ದಾಖಲಾಗಿದ್ದು , ಇನ್ ಸ್ಪೇಕ್ಟರ್ ಸೀತಾರಾಮ್ ಪಿ. ತನಿಖೆ ಕೈಗೊಂಡಿದ್ದಾರೆ ಎಂದು ವರದಿಯಾಗಿದೆ.