ಶಿರಸಿ:ನಗರದ ಸಾಮ್ರಾಟ್ ಹೊಟೆಲ್ ಎದುರುಗಡೆ ಖಾಸಗಿ ಬಸ್ ಮತ್ತು ಬೈಕ್ ನಡುವೆ ಅಪಘಾತ ಸಂಭವಿಸಿದೆ. ಈ ಅಪಘಾತದಲ್ಲಿ ಬೈಕ್ ಸವಾರ ಸ್ಥಳದಲ್ಲಿ ದುರ್ಮರಣ ಹೊಂದಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.

ಮೃತನನ್ನು ಗಣೇಶ ನಗರ ಮಹೇಶ್ ಬೋವಿವಡ್ಡರ್ (26) ಎಂದು ಗುರುತಿಸಲಾಗಿದೆ. ಸಾಮ್ರಾಟ್ ಎದುರಿನ ಇಳಿಜಾರಿನಲ್ಲಿ ಬೈಕ್’ನ ಹಿಂಬದಿಗೆ ಖಾಸಗಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ರಸ್ತೆಯ ಮೇಲೆ ಬಿದ್ದಿದ್ದು, ಬಿದ್ದವನ ತಲೆಮೇಲೆ ಬಸ್ ಹರಿದು ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಒಂದು ತಿಂಗಳ ಹಿಂದಷ್ಟೇ ಯುವಕನ ಮದುವೆಯಾಗಿತ್ತು ಎನ್ನಲಾಗಿದೆ.

RELATED ARTICLES  ಬಡ ಕುಟುಂಬಗಳಿಗೆ ಎಂ ಆರ್ ಬ್ರದರ್ಸ್ ವತಿಯಿಂದ ಸಹಾಯ ಹಸ್ತ

ಶಿರಸಿ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ಈ ಪ್ರಕರಣ ದಾಖಲಾಗಿದೆ. ಪಿ.ಎಸ್.ಐ ಭೀಮಶಂಕರ್ ಇವರಿಂದ ತನಿಖೆ ಮುಂದುವರಿದೆ ಎಂದು ವರದಿಯಾಗಿದೆ.