ಶಿವಮೊಗ್ಗ: ದೇವರ ಬಳಿ ಪ್ರಾರ್ಥನೆ ಮಾಡಿದರೂ ಗಂಡನ ಕಿರುಕುಳ ತಪ್ಪಲಿಲ್ಲ ಎಂಬ ಕಾರಣಕ್ಕೆ ಮಹಿಳೆಯೊಬ್ಬಳು ಶಕ್ತಿದೇವತೆಯ ವಿಗ್ರಹಕ್ಕೆ ಹಾನಿ ಮಾಡಿದ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಶಂಕರಮಠ ರಸ್ತೆಯಲ್ಲಿರುವ ನಿಮಿಷಾಂಬ ದೇವಾಲಯದಲ್ಲಿ ಹೊಳೆನರಸಿಪುರ ಮೂಲದ ಶಾಂತಮ್ಮ ಎಂಬುವವರು ಕಲ್ಲಿನ ವಿಗ್ರಹ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ಕೋಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಮಹಿಳೆ ಮಾನಸಿಕವಾಗಿ ಅಸ್ವತ್ಥೆ ಎಂಬ ಉತ್ತರವನ್ನು ದೇವಸ್ಥಾನ ಸಮಿತಿಗೆ ಅವರ ಸಂಬಂಧಿಕರು ತಿಳಿಸಿದ್ದಾಗಿ ದೇವಸ್ಥಾನದ ಆರ್ಚಕರು ಸ್ಪಷ್ಟಪಡಿಸಿದ್ದಾರೆ.

RELATED ARTICLES  ಚುನಾವಣೆ ರಾಜಕಾರಣಕ್ಕೆ ಮುಖ್ಯ ಮಂತ್ರಿ ವಿದಾಯ.!

ದೇವಸ್ಥಾನಕ್ಕೆ ತೆರಳಿದ್ದ ಶಾಂತಮ್ಮ ಏಕಾಏಕಿ ಗರ್ಭ ಗುಡಿಗೆ ತೆರಳಿ ದೇವರ ಮೂರ್ತಿಯನ್ನು ಭಗ್ನಗೊಳಿಸಿದ್ದಾರೆ. ದೇವಸ್ಥಾನ ಕ್ಕೆ ಮಹಿಳೆ ಬಂದ ಸಮಯದಲ್ಲಿ ಪೂಜೆ ಮಾಡಿದ ಆರ್ಚಕರು ಮಂಗಳಾರತಿ ಕೊಡಲು ಮುಂದಾಗಿದ್ದಾರೆ. ಈ ವೇಳೆ ಮಹಿಳೆ ಪೂಜಾರಿಯನ್ನು ತಳ್ಳಿ ಗರ್ಭ ಗುಡಿ ಪ್ರವೇಶ ಮಾಡಿದ್ದಾಳೆ. ನಿಮಿಷಾಂಬ ದೇವಿಯ ಮೂರ್ತಿಗೆ ತೊಡಿಸಲಾಗಿದ್ದ, ಸೀರೆ ಮತ್ತು ಹೂವಿನ ಹಾರವನ್ನು ಕಿತ್ತು ಹಾಕಿದ್ದಾಳೆ. ಈ ವೇಳೆ ಆರ್ಚಕರು ಅವಳನ್ನು ಹೊರಗೆ ಕರೆತರಲು ಪ್ರಯತ್ನ ನಡೆಸಿದ್ದಾರೆ. ಅದರೆ ಅದು ಸಾಧ್ಯವಾಗಿಲ್ಲ. ಅಲ್ಲದೇ ದೇವರ ಮೂರ್ತಿ ಮುಂದೆ ಇದ್ದ ತ್ರೀಶೂಲ ತೆಗೆದುಕೊಂಡು ದೇವಿಯ ಮೂರ್ತಿಯನ್ನು ಭಗ್ನ ಮಾಡಿದ್ದಾಳೆ. ಈ ವೇಳೆ ದೇವಸ್ತಾನದಲ್ಲಿ ಇದ್ದ ಸಾರ್ವಜನಿಕರು ಆಕೆಯನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

RELATED ARTICLES  ಲೀಗಲ್‍ಡೆಸ್ಕ್ ನಿಂದ ಬೆಂಗಳೂರು ಒನ್ ಕೇಂದ್ರದೊಂದಿಗೆ ಬಾಡಿಗೆ ಕರಾರು ಪತ್ರ ಸೇವೆ ಪ್ರಾರಂಭ.

ಪತಿ ಹಾಗೂ ಆತನ ಕುಟುಂಬದವರು ಆಕೆಗೆ ಕಿರುಕುಳ ನೀಡುತ್ತಿದ್ದರು. ಇದರಿಂದ ಜಿಗುಪ್ಸೆಗೆ ಒಳಗಾದ ಶಾಂತಮ್ಮ ಈ ರೀತಿ ವರ್ತಿಸಿದ್ದಾಳೆ ಎಂದು ತಿಳಿದುಬಂದಿದೆ.