ಭಟ್ಕಳ: ಕುಂದಾಪುರ ಕಡೆಯಿಂದ ಭಟ್ಕಳದ ಕಡೆಗೆ ಅಕ್ರಮವಾಗಿ ಯಾವುದೇ ದಾಖಲೆ ಇಲ್ಲದೆ ಮಾರೂತಿ ಸುಜೂಕಿ ವಾಹನದಲ್ಲಿ ಪಡಿತರ ಅಕ್ಕಿಯನ್ನು ಸಾಗಾಟ ಮಾಡುತ್ತಿದ್ದಾಗ ಖಚಿತ ಮಾಹಿತಿ ಮೆರೆಗೆ ದಾಳಿ ಮಾಡಿದ ಆಹಾರ ನಿರೀಕ್ಷಕ ಪಾಂಡು ನಾಯ್ಕ ಹಾಗೂ ಶಹರ ಠಾಣೆಯ ಪಿ.ಎಸ್.ಐ ಹನುಮಂತ ಕುಡಗುಂಟಿ ಪುರವರ್ಗ ಚೆಕ್ ಪೋಸ್ಟ್ ಬಳಿ ದಾಳಿ ನಡೆಸಿ ವಾಹನ ಸಮೇತ 510 ಕೆ.ಜಿ ಪಡಿತರ ಅಕ್ಕಿಯನ್ನು ವಶಕ್ಕೆ ಪಡೆದುಕೊಂಡಿರುವ ಘಟನೆ ನಡೆದಿದೆ.

RELATED ARTICLES  ಸ್ಥಳೀಯ ವಾಹನಗಳಿಗೆ ಶುಲ್ಕ ವಸೂಲಿ : ಹೊಳೆಗದ್ದೆ ಟೋಲ್ ನಲ್ಲಿ ಪ್ರತಿಭಟನೆ

ಅಕ್ರಮ ಪಡಿತರ ಅಕ್ಕಿ ಸಾಗಾಟ ಮಾಡುತ್ತಿದ್ದ ಇಬ್ಬರು ಆರೋಪಿಗಳಾದ ಬೆಳ್ಳಿ ನಿವಾಸಿ ಸೈಯ್ಯದ್ ಅಲಿ(27) ಹಾಗೂ ಗಣೇಶನಗರ ಪುರವರ್ಗ ನಿವಾಸಿ ನೌಶಾದ್(26) ಎಂಬುವವರು ಪರಾರಿಯಾಗಿದ್ದಾರೆ. ಈ ಘಟನೆಗೆ ಸಂಬಂಧಿಸಿದಂತೆ ಆಹಾರ ನಿರೀಕ್ಷಕ ಪಾಂಡು ನಾಯ್ಕ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

RELATED ARTICLES  KGF ನಲ್ಲಿಯೂ ನಟಿಸಿದ್ದ ಖ್ಯಾತ ನಟ ಇನ್ನಿಲ್ಲ.

ಈ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಆರೋಪಿಗಳಿಗಾಗಿ ಶೋಧಿಸುತ್ತಿದ್ದಾರೆ. ಈ ಸಂದರ್ಭದಲ್ಲಿ ಸೂಸಗಡಿ ಕಂದಾಯ ನಿರೀಕ್ಷ ವಿಶ್ವನಾಥ್ ಗಾಂವಕರ್ ಮುಂತಾದವರು ಉಪಸ್ಥಿತಿ ಇದ್ದರು.