ಹೊನ್ನಾವರ: ತಾಲೂಕಿನ ಉಪ್ಪೋಣಿ ಗ್ರಾಮ ಪಂಚಾಯತ ವ್ಯಾಪ್ತಿಯ ಮಹಿಮೆ, ಎಲೆಕೊಟ್ಟಿಗೆ ನಿವಾಸಿ ಈಶ್ವರ ಸಣ್ಣಯ್ಯ
ನಾಯ್ಕ (52) ಈತ ವಿದ್ಯುತ್ ಶಾಕ್ ಹೊಡೆದು ಮೃತ ಪಟ್ಟ ಘಟನೆ ನಡೆದಿದೆ.

ಮನೆಯಲ್ಲಿ ಸ್ನಾನ ಮಾಡಲು ಬಾತ್ ರೂಮ್ ಗೆ ಹೋದಾಗ, ಬಾತ್ ರೂಮ್ ನಿಂದ ಮನೆಯ ಮತ್ತೊಂದು ಕೋಣೆಗೆ ವಿದ್ಯುತ್ ಸಂಪರ್ಕ ಇರುವ ವಾಯರ್ ಆಕಸ್ಮಿಕವಾಗಿ ಬಲ ಕೈತಾಗಿ ವಿದ್ಯುತ್ ಶಾಕ್ ಹೊಡೆದು ಕೆಳಗೆ ಬಿದ್ದು
ಅಶ್ವಸ್ತಗೊಂಡವನನ್ನು ಚಿಕಿತ್ಸೆಗೆ ಹೊನ್ನಾವರ ಖಾಸಗಿ ಆಸ್ಪತ್ರೆಗೆ ಕರೆದುಕೊಂಡು ಹೋದಾಗ ಅಲ್ಲಿ ಪರೀಕ್ಷೆ ಮಾಡಿದ ವೈದ್ಯರು ಈಗಾಗಲೇ ಮೃತ ಪಟ್ಟಿರುವ ಬಗ್ಗೆ ತಿಳಿಸಿರುವುದಾಗಿ ಮೃತ
ವ್ಯಕ್ತಿಯ ಮಗ ಕಿರಣ ಈಶ್ವರ ನಾಯ್ಕ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ನೀಡಿದ ದೂರಿನಲ್ಲಿ ತಿಳಿಸಿದ್ದಾನೆ.

RELATED ARTICLES  ಸರ್ಕಾರಿ ನೌಕರರ ಮಹಾ ಸಮ್ಮೇಳನಕ್ಕೆ ಸಂಪೂರ್ಣ ಬೆಂಬಲ : ನೌಕರರ ಸಂಘ ಹಾಗೂ ವೃಂದ ಸಂಘಗಳ ಜಂಟಿ ಸಭೆಯಲ್ಲಿ ನಿರ್ಧಾರ.

ಸಚಿವರಾದ ಮಂಕಾಳ ವೈದ್ಯ ಬ್ಲಾಕ್ ಕಾಂಗ್ರೇಸ್ ಅಧ್ಯಕ್ಷ ಗೋವಿಂದ ನಾಯ್ಕ, ಮಾಜಿ ಜಿ.ಪಂ.ಸದಸ್ಯ ಕೃಷ್ಣ ಗೌಡ, ಚಂದ್ರಕಾಂತ ಕೊಚಡೇಕರ್ ಮತ್ತಿತರರು ಮೃತರ ಅಂತಿಮ
ನಮನ ಸಲ್ಲಿಸಿದರು ಎಂದು ವರದಿಯಾಗಿದೆ.

RELATED ARTICLES  ಹಂದಿ ಅಡ್ಡ ಬಂದ ಪರಿಣಾಮ : ಸಹಕಾರಿ ಧುರೀಣ ಟಿ.ಪಿ ಹೆಗಡೆ ಹುಣಸೆಮಕ್ಕಿ ಸಾವು.