ಕಾರವಾರ: ಸದಾಶಿವಗಡದಲ್ಲಿ ಕಾರು ಮತ್ತು ಗೂಡ್ಸ್ ವಾಹನದ ನಡುವೆ ಅಪಘಾತ ಸಂಭವಿಸಿದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಈ ಅಪಘಾತದಲ್ಲಿ ಮೃತಪಟ್ಟವನನ್ನು ಕಾರವಾರದ ಭೈರಾದ ಸೀಮಗುಡ್ಡ ನಿವಾಸಿ ಉದಯ ಪಾಗಿ (45)ಎಂದು ಗುರುತಿಸಲಾಗಿದೆ. ಕಾರವಾರದಿಂದ ಸದಾಶಿವಗಡ ಮಾರ್ಗವಾಗಿ ಭೈರಾಕ್ಕೆ ತೆರಳುತ್ತಿದ್ದ ಸಮಯದಲ್ಲಿ ಎದುರಿನಿಂದ ಬಂದ ಗೂಡ್ಸ್ ವಾಹನ ಗುದ್ದಿದ ಪರಿಣಾಮ ಕಾರು ಚಾಲಕ ಉದಯ್ ಪಾಗಿ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ.
ಗೂಡ್ಸ್ ವಾಹನ ಚಾಲಕ ಹೋಟೆಗಾಳಿಯ ಪಂಕಜ್ ಮೇಲೆ ಚಿತ್ತಾಕುಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.