ಗೋಕರ್ಣ: ನೇಣು ಬಿಗಿದುಕೊಂಡು ಮಹಿಳೆಯೊಬ್ಬಳು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಗೋಕರ್ಣ ತಾಲೂಕಿನ ಹನೆ ಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಹೊಸಕೇರಿಯಲ್ಲಿ ನಡೆದಿದೆ. ಪೂರ್ಣಿಮಾ ಶಾಮಸುಂದರ ಭಟ್ ಸಾವಿಗೀಡಾದ ಮಹಿಳೆ.
ಈಕೆಯ ಮಗಳು ಆರು ವರ್ಷದ ಹಿಂದೆ ಮೃತಪಟ್ಟಿದ್ದಾರೆ. ಮಾನಸಿಕವಾಗಿ ನೊಂದು ಆತ್ಮಹತ್ಯೆ ಮಾಡಿಕೊಂಡಿರುವ ಬಗ್ಗೆ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಪೊಲೀಸರು ಭೇಟಿ ನೀಡಿ ಮುಂದಿನ ಪ್ರಕ್ರಿಯೆಗಳನ್ನು ಕೈಗೊಂಡಿದ್ದಾರೆ. ಪೊಲೀಸ್ ತನಿಖೆಯ ನಂತರದಲ್ಲಿ ಘಟನೆಯ ಪೂರ್ಣ ವಿವರ ತಿಳಿದು ಬರಬೇಕಾಗಿದೆ.