ಭಾರತೀಯ ಜನತಾ ಪಾರ್ಟಿ ಕುಮಟಾ ಮಂಡಲ ಮಿರ್ಜಾನ ಮಹಾಶಕ್ತಿಕೇಂದ್ರದ ಕಾರ್ಯಕರ್ತರ ಅಭಿನಂದನಾ ಸಭೆ ಹಾಗೂ ಶಾಸಕರಿಗೆ ಸನ್ಮಾನ ಕಾರ್ಯಕ್ರಮವನ್ನು ಹಿರೇಗುತ್ತಿ ನಾಡವರ ಸಭಾಭವನದಲ್ಲಿ ಹಮ್ಮಿಕೊಳ್ಳಲಾಗಿತ್ತು.

ಮಿರ್ಜಾನ ಮಹಾಶಕ್ತಿಕೇಂದ್ರದ ಎಲ್ಲಾ ಶಕ್ತಿಕೇಂದ್ರಗಳ ಪದಾಧಿಕಾರಿಗಳಿಗೆ, ಪಂಚಾಯತ್ ಸದಸ್ಯರಿಗೆ ಹಾಗೂ ಕಾರ್ಯಕರ್ತರಿಗೆ ಶಾಸಕರು ಅಭಿನಂದನೆ ಸಲ್ಲಿಸಿದರು. ನಂತರ ಕಾರ್ಯಕರ್ತರೆಲ್ಲರು ಶಾಸಕರನ್ನು ಸನ್ಮಾನಿಸಿ ಗೌರವಿಸಿದರು.

RELATED ARTICLES  ವೀರ ಮರಣವಪ್ಪಿದ ಸೈನಿಕರ ಸ್ಮರಣೆ : ಕುಮಟಾ ಬ್ಲಾಕ್ ಕಾಂಗ್ರೆಸ್ ಕಛೇರಿಯಲ್ಲಿ ನುಡಿನಮನ.

ಕುಮಟಾ ಮಂಡಲ ಭಾರತೀಯ ಜನತಾ ಪಾರ್ಟಿ ಅಧ್ಯಕ್ಷ ಹೇಮಂತಕುಮಾರ ಗಾಂವಕರ, ಜಿಲ್ಲಾ ಯುವಮೋರ್ಚಾ ಪ್ರಭಾರಿ ಎಮ್. ಜಿ. ಭಟ್ , ಮಿರ್ಜಾನ ಮಹಾಶಕ್ತಿಕೇಂದ್ರದ ಅಧ್ಯಕ್ಷ ಮಹೇಶ ನಾಯಕ ದೇವರಾಬಾವಿ, ಕಾರ್ಯದರ್ಶಿ ರಾಘವೇಂದ್ರ ನಾಯ್ಕ, ಸಾಹಿತಿ ರಾಜೀವ್ ಗಾಂವಕರ, ಪಕ್ಷದ ಪ್ರಮುಖರಾದ ಗಣೇಶ ಅಂಬಿಗ, ಬಾಳಾ ಡಿಸೋಜಾ, ಗ್ರಾಮಪಂಚಾಯತ್ ಸದಸ್ಯರುಗಳು, ಶಕ್ತಿಕೇಂದ್ರದ ಪ್ರಮುಖರು, ಬೂತ್ ಕಮಿಟಿ ಅಧ್ಯಕ್ಷರು ಹಾಗೂ ಕಾರ್ಯಕರ್ತರು, ಅಭಿಮಾನಿಗಳು ಉಪಸ್ಥಿತರಿದ್ದರು.

RELATED ARTICLES  ಸೆಂಟ್ರಿಂಗ್‌ ಕಾರ್ಮಿಕರ ಸಂಘ (ರಿ.) ಭಟ್ಕಳ, ಇದರ ವಾರ್ಷಿಕ ಸಭೆ ಸಂಪನ್ನ.