ಉಡುಪಿ : ಉಡುಪಿಯ ಪೇಜಾವರ ಶ್ರೀ ವಿಶ್ವಪ್ರಸನ್ನ ತೀರ್ಥ ಸ್ವಾಮೀಜಿಗಳಿಂದ ಮಹತ್ತರ ಕಾರ್ಯ ಮಾಡಿದ್ದಾರೆ. ತಾವೇ ಸ್ವತಃ ಬಾವಿಗಿಳಿದು ಬೆಕ್ಕಿನ ಮರಿಯನ್ನ ಪೇಜಾವರ ಶ್ರೀಗಳು ರಕ್ಷಿಸಿದ್ದಾರೆ ಎಂದು ತಿಳಿದು ಬಂದಿದೆ.

40 ಅಡಿ ಆಳದ ಬಾವಿಗೆ ಬಿದ್ದು ಅಸಹಾಯಕ ಸ್ಥಿತಿಯಲ್ಲಿ ಬೆಕ್ಕು ಚಿರಾಟ ನಡೆಸಿತ್ತು. ಬೆಕ್ಕಿನ ಆಕ್ರಂದನ ಕೇಳಿ ಪೇಜಾವರ ಶ್ರೀಗಳು
ತಾವೇ ಸ್ವತಃ 40 ಅಡಿ ಆಳದ ಬಾವಿಗಿಳಿದು ಬೆಕ್ಕಿನ ಮರಿಯನ್ನು ರಕ್ಷಿಸಿ ಜನ ಮೆಚ್ಚುಗೆಗೆ ಕಾರಣರಾಗಿದ್ದಾರೆ ಎನ್ನಲಾಗಿದೆ.

RELATED ARTICLES  ವಿಧಾನಪರಿಷತ್ ಉಪಸಭಾಪತಿ ರೈಲಿಗೆ ತಲೆಕೊಟ್ಟು ಆತ್ಮಹತ್ಯೆ

ಉಡುಪಿಯ ಮುಚ್ಚುಕೋಡು ಸುಬ್ರಮಣ್ಯ ದೇವಾಲಯದಲ್ಲಿ ಬೆಕ್ಕಿನ ಮರಿಯನ್ನು ರಕ್ಷಣೆ ಮಾಡಿದ್ದಾರೆ. ದೇವಾಲಯಕ್ಕೆ ಬಂದ
ವೇಳೆ ಬಾವಿಗೆ ಬೆಕ್ಕು ಬಿದ್ದಿರುವ ಮಾಹಿತಿಯನ್ನು ದೇವಾಲಯದ ಸಿಬ್ಬಂದಿ ನೀಡಿದ್ದಾರೆ. ಕೂಡಲೇ ಶ್ರೀಗಳು ಹಿಂದು ಮುಂದು ನೋಡದೆ ಹಗ್ಗದ ಸಹಾಯದಿಂದ ಬಾವಿಗಿಳಿದು ರಕ್ಷಣೆ
ಮಾಡಿದ್ದಾರೆ. ಪೇಜಾವರ ಶ್ರೀಗಳ ಮಹತ್ಕಾರ್ಯಕ್ಕೆ ಭಾರೀ ಮೆಚ್ಚುಗೆ ವ್ಯಕ್ತವಾಗಿದೆ.

RELATED ARTICLES  ನಾಪತ್ತೆಯಾಗಿದ್ದ ಸುವರ್ಣ ತ್ರಿಭುಜ ಬೋಟ್​​ನ ಅವಶೇಷ ಪತ್ತೆ..!!