ಶಿರಸಿ : ಇಲ್ಲಿನ ಸರಕಾರಿ ಪದವಿ ಕಾಲೇಜಿನಲ್ಲಿ ಉಪನ್ಯಾಸಕರಾಗಿ ಸೇವೆ ಸಲ್ಲಿಸಿ, ನಂತರ ಮುಂಡಗೋಡಿನ ಕಾಲೇಜಿನಲ್ಲಿ ಪ್ರಾಂಶುಪಾಲರಾಗಿದ್ದ ನರಸಿಂಹ ಪಿ ಭಟ್ಟ ಬಹು ಅಂಗಾಂಗ ವೈಫಲ್ಯದಿಂದ ಇಹಲೋಕ ತ್ಯಜಿಸಿದ್ದಾರೆ.
ಸರಕಾರಿ ಪದವಿ ಕಾಲೇಜಿನಲ್ಲಿ ಎನ್.ಪಿ. ಭಟ್ ಸರ್ ಎಂದೇ ವಿದ್ಯಾರ್ಥಿಗಳಿಗೆ ಆಪ್ತರಾಗಿದ್ದ ಇವರು, ವಾಣಿಜ್ಯ ವಿಭಾಗದ ಮುಖ್ಯಸ್ಥರಾಗಿದ್ದರು. ಜೊತೆಗೆ ಮಕ್ಕಳ ಸಾಂಸ್ಕೃತಿಕ ವಿಭಾಗದ ಚಟುವಟಿಕೆಯಲ್ಲಿಯೂ ಅತ್ಯಾಸಕ್ತಿಯಿಂದ ತೊಡಗಿಸಿಕೊಳ್ಳುತ್ತಿದ್ದರು. ಶ್ರೀಯುತರ ಅಗಲುವಿಕೆ ಅವರ ಒಡನಾಡಿಗಳಿಗೆ, ವಿದ್ಯಾರ್ಥಿಗಳಿಗೆ ಅತೀವ ದುಃಖವನ್ನುಂಟುಮಾಡಿದೆ