ಕುಮಟಾ ಹೊನ್ನಾವರ ವಿಧಾನಸಭಾ ಕ್ಷೇತ್ರದ ಶಾಸಕರಾಗಿ ಮತ್ತೊಮ್ಮೆ ಆಯ್ಕೆಯಾಗಿರುವ ಮಾನ್ಯ ದಿನಕರ ಶೆಟ್ಟಿ ಅವರಿಗೆ ನವಿಲಗೋಣ ಗ್ರಾಮಪಂಚಾಯತ್ ಭಾಗದ ಬಿಜೆಪಿ ಕಾರ್ಯಕರ್ತರು ಅಭಿನಂದನಾ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು.

ಸನ್ಮಾನವನ್ನು ಸ್ವೀಕರಿಸಿ ಮಾತನಾಡಿದ ದಿನಕರ ಶೆಟ್ಟಿಯವರು ಭಾರತೀಯ ಜನತಾ ಪಾರ್ಟಿಯಮೇಲೆ ಭರವಸೆಯನ್ನಿಟ್ಟು ಮತಚಲಾಯಿಸಿದ ಎಲ್ಲರಿಗೆ ಧನ್ಯವಾದಗಳನ್ನು ಸಲ್ಲಿಸಿದರು. ಚಿಕ್ಕ ಗ್ರಾಮವಾಗಿರುವ ನವಿಲುಗೋಣಿನ ಅಭಿವೃದ್ಧಿಗೆ ಹಿಂದಿನ ಬಿಜೆಪಿ ಸರ್ಕಾರ ಸಾಕಷ್ಟು ಅನುದಾನವನ್ನು ಒದಗಿಸಿತ್ತು. ಜಿ. ಪಂ. ಮಾಜಿ ಸದಸ್ಯ ಶಿವಾನಂದ ಹೆಗಡೆ ಹಾಗೂ ಪಂಚಾಯತ್ ಅಧ್ಯಕ್ಷರಾದ ಸತೀಶ್ ಹೆಬ್ಬಾರ ಅವರು ಈ ಭಾಗದ ಅಭಿವೃದ್ಧಿಗಾಗಿ ನಿರಂತರವಾಗಿ ನಮ್ಮ ಗಮನವನ್ನು ಸೆಳೆದುದರಿಂದ ನಾನು ವಿಶೇಷ ಕಾಳಜಿವಹಿಸಲು ಸಾಧ್ಯವಾಗಿದೆ. ದೇಶದ ಹಾಗೂ ರಾಜ್ಯದ ಅಭಿವೃದ್ಧಿ ಬಿಜೆಪಿಯಿಂದ ಮಾತ್ರ ಸಾಧ್ಯ. ಮುಂಬರಲಿರುವ ಜಿ. ಪಂ., ತಾ. ಪಂ. ಹಾಗೂ ಲೋಕಸಭಾ ಚುನಾವಣೆಯಲ್ಲಿ ನಾವೆಲ್ಲರೂ ಸಂಘಟಿತರಾಗಿ ಭಾರತೀಯ ಜನತಾ ಪಾರ್ಟಿಯನ್ನು ಗೆಲ್ಲಿಸಲು ಶ್ರಮಿಸೋಣ ಎಂದು ಹೇಳಿದರು.

RELATED ARTICLES  ಅಂಕೋಲಾ‌ ಬೈಕ್ ಅಪಘಾತ ಇಬ್ಬರ ದುರ್ಮರಣ

ಕೆ. ಡಿ. ಸಿ. ಸಿ. ನಿರ್ದೇಶಕ ಶ್ರೀ ಶಿವಾನಂದ ಹೆಗಡೆ ಕಡತೋಕಾ, ನವಿಲುಗೋಣ ಗ್ರಾಮಪಂಚಾಯತ್ ಅಧ್ಯಕ್ಷ ಸತೀಶ ಹೆಬ್ಬಾರ, ಗ್ರಾ. ಪಂ. ಸದಸ್ಯರಾದ ಸತೀಶ ಹಬ್ಬು ಮತ್ತು ಶಿವಾನಂದ ನಾಯ್ಕ, ಸ್ಥಳೀಯ ಪ್ರಮುಖರಾದ ಕೃಷ್ಣ ಮಡಿವಾಳ, ಬೀರು ಗೌಡ, ಶಂಕರ ಗೌಡ, ಅರ್ಚಕ ಪರಮೇಶ್ವರ ಗೌಡ ಅವರು ವೇದಿಕೆಯಲ್ಲಿ ಇದ್ದರು.

RELATED ARTICLES  ರಗಡ್ ಎಂಟ್ರಿ ಕೊಟ್ಟಿದೆ ಆಚೆ ಚಿತ್ರದ 2ನೇ ಟೀಸರ್