ಕುಮಟಾ : ರಾಜ್ಯವ್ಯಾಪಿ ನಡೆಯುತ್ತಿರುವ ರಾಮ ಮಂದಿರಕ್ಕೆ ಹನುಮನ ನಾಡಿನ ಮೃತ್ತಿಕೆ ಕಾರ್ಯಕ್ರಮದ ಅಂಗವಾಗಿ ತಾಲೂಕಿನ ಯುವಾ ಬ್ರಿಗೇಡ್ ತಂಡದ ಸದಸ್ಯರು ರವಿವಾರ ಚಂದಾವರದ ಹನುಮಂತ ದೇವಾಲಯಕ್ಕೆ ತೆರಳಿ ದೇವಾಲಯದ ಆವಾರ ಸ್ವಚ್ಛಮಾಡಿದರು. ನಂತರ ಅಲ್ಲಿಯ ಮಣ್ಣನ್ನು ಸಂಗ್ರಹಿಸಿದರು. ದೇವಾಲಯದ ಸ್ವಚ್ಚತೆಯ ಕಾರ್ಯದಲ್ಲಿ ಪಾಲ್ಗೊಂಡ ಯುವಾ ಬ್ರಿಗೇಡ್ ಸದಸ್ಯರಿಗೆ ದೇವಾಲಯದ ವತಿಯಿಂದ ಧನ್ಯವಾದ ಸಮರ್ಪಿಸಿದರು.
ಗ್ರಾಮ ಗ್ರಾಮದಲ್ಲಿ ಇರುವ ಹನುಮನ ದೇವಾಲಯವನ್ನು ಸ್ವಚ್ಚಮಾಡುವ ಹಾಗೂ ಅಲ್ಲಿಯ ಮಣ್ಣನ್ನು ಸಂಗ್ರಹಿಸಿ ರಾಮ ಮಂದಿರಕ್ಕೆ ಕಳುಹಿಸಿಕೊಡುವ ಯೋಜನೆ ಯುವಾ ಬ್ರಿಗೇಡ್ ತಂಡದ್ದಾಗಿದೆ.