ಹೊನ್ನಾವರ : ತಾಲೂಕಿನ ಮಂಕಿ ಪೊಲೀಸ್ ಠಾಣೆ ವ್ಯಾಪ್ತಿಯ ನಾಕುದಾಮುಲ್ಲಾದ ಸಮುದ್ರದ ಅಂಚಿನಲ್ಲಿ ಮೀನು ಹಿಡಿಯಲು ಹೋದ ಮಂಕಿ ಹೊಸಹಿತ್ತು ನಿವಾಸಿ ಇರಪಾನ್ ಯಾಕೂಬ್ ದಾಹುದ್ (34) ನೀರಿನಲ್ಲಿ ಮುಳುಗಿ ಮೃತ ಪಟ್ಟಿರುವ ಘಟನೆ ನಡೆದಿದೆ ಎಂದು ತಿಳಿದುಬಂದಿದೆ.
ಸಮುದ್ರದ ಅಂಚಿನ ನೀರಿನಲ್ಲಿ ಮೀನು ಹಿಡಿಯಲು ಬಲೆ ಹಾಕುತ್ತಿದ್ದಾಗ ಆಕಸ್ಮಿಕವಾಗಿ ಬಲೆ ಕಾಲಿಗೆ ಸಿಲುಕಿ ತೆರೆಯ ರಭಸಕ್ಕೆ ನೀರಿನಲ್ಲಿ ಕೊಚ್ಚಿ ಹೋಗಿ ಮೃತ ಪಟ್ಟಿದ್ದಾನೆ.
ಸ್ಥಳದಲ್ಲಿ ಇದ್ದವರು ಬೋಟ್ ಮೂಲಕ ರಕ್ಷಣೆ ಮಾಡುವ ಪ್ರಯತ್ನ ಮಾಡಿದರು, ಸಾಧ್ಯವಾಗಿಲ್ಲ ಎನ್ನಲಾಗಿದೆ.
ಈ ಘಟನೆಗೆ ಸಂಬಂಧ ಪಟ್ಟಂತೆ ಮಂಕಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ವರದಿಯಾಗಿದೆ.