ಹೊನ್ನಾವರ: ಬ್ಯಾಟರಿ ಜಾರ್ಜ ಮಾಡಲು ಬೆಡ್
ರೂಮನಲ್ಲಿರುವ ವಿದ್ಯುತ್ ಸ್ವೀಚ್ ಬೋರ್ಡ್ ಗೆ ಕೈ ಹಾಕಿದಾಗ ಎಡಗೈಗೆ ವಿದ್ಯುತ್ ಶಾಕ್ ಹೊಡೆದು ವ್ಯಕ್ತಿಯೊರ್ವ ಮೃತಪಟ್ಟ
ಘಟನೆ ಸಂಭವಿಸಿದೆ.
ತಾಲೂಕಿನ ಮೇಲಿನ ಮೂಡ್ಕಣಿ ನಿವಾಸಿ ಆಚಾರಿ ವೃತ್ತಿ ನಿರ್ವಹಿಸುತ್ತಿದ್ದ ರಾಮಕೃಷ್ಣ ಶಂಕರ ಆಚಾರಿ(30) ಎಂದು ಗುರುತಿಸಲಾಗಿದೆ.
ಮೇಲಿನ ಮೂಡ್ಕಣಿ ಗ್ರಾಮದಲ್ಲಿರುವ ತಮ್ಮ ಮನೆಯಲ್ಲಿದ್ದಾಗ ಈ ಘಟನೆ ನಡೆದಿದೆ ಎನ್ನಲಾಗಿದೆ.ಈತನ ಮರಣದಲ್ಲಿ ಬೇರೆ
ಯಾವುದೇ ಸಂಶಯ ಇರುವುದಿಲ್ಲಾ, ಈ ಬಗ್ಗೆ ಮುಂದಿನ ಕಾನೂನು ಕ್ರಮ ಜರುಗಿಸಲು ಮೃತನ ಸಹೋದರ ಕೇಶವ ಶಂಕರ ಆಚಾರಿ ದೂರಿನಲ್ಲಿ ತಿಳಿಸಿದ್ದಾರೆ. ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.