ಹೊನ್ನಾವರ: ಪಟ್ಟಣದ ಸ.ಕಿ.ಪ್ರಾ.ಶಾಲೆ ಗುಣಗುಣಿಯಲ್ಲಿ ಶಿಕ್ಷಕರಾಗಿ ಸೇವೆ ಸಲ್ಲಿಸುತ್ತಿದ್ದ ಆರ್.ಎಸ್.ನಾಯ್ಕ ನಿಧನರಾದರು. ಇವರು ತಾಲೂಕಿನ ಹಡಿಕಲ್, ಹಳದೀಪುರ
ಶಾಲೆಯಲ್ಲಿ ಶಿಕ್ಷಕರಾಗಿ, ಸಿ.ಆರ್.ಪಿ.ಯಾಗಿ ಸೇವೆ ಸಲ್ಲಿಸಿದ್ದರು.

ಶಿಕ್ಷಕ ವೃತ್ತಿಯನ್ನು ಅತ್ಯಂತ ಪ್ರೀತಿಯಿಂದ ಸೇವೆ ಸಲ್ಲಿಸುವ ಮೂಲಕ ಮಕ್ಕಳಿಗೆ ಶಿಕ್ಷಣ ಹಾಗೂ ಸಂಸ್ಕಾರದ ಮಹತ್ವವನ್ನು ಸಾರುತ್ತಿದ್ದರು. ಪತ್ನಿ ಜ್ಯೋತಿಲತಾ ಜಡ್ಡಿ ಶಾಲೆಯಲ್ಲಿ ಶಿಕ್ಷಕಿಯಾಗಿದ್ದು, ಇರ್ವರು ಪುತ್ರಿಯರು, ಅಪಾರ ಶಿಕ್ಷಣ ಅಭಿಮಾನಿಗಳನ್ನು ಅಗಲಿದ್ದಾರೆ.

RELATED ARTICLES  How Much Does a Ship Order Star of the event Cost?

ಇವರ ನಿಧನಕ್ಕೆ ಕ್ಷೇತ್ರ ಶಿಕ್ಷಣಾಧಿಕಾರಿ ಜಿ.ಎಸ್.ನಾಯ್ಕ, ಶಿಕ್ಷಕ ಸಂಘದ ಅಧ್ಯಕ್ಷ ಎಂ.ಜಿ.ನಾಯ್ಕ, ಯುವಜನಸೇವಾ
ಕ್ರೀಡಾಧಿಕಾರಿ ಸುಧೀಶ ನಾಯ್ಕ ಸಂತಾಪ ಸೂಚಿಸಿದ್ದಾರೆ.

RELATED ARTICLES  ಧಾರೇಶ್ವರದಲ್ಲಿ ಶಿವ-ಗಂಗಾ ವಿವಾಹೋತ್ಸವ: ಸೇವೆಗೈದು ಕೃತಾರ್ಥರಾದ ಭಕ್ತರು.