ಕಾರವಾರ : ಪ್ಯಾರಲಿಸೀಸ್ ಆಗದೇ ಇರುವ ಮಹಿಳೆಗೆ ಪ್ಯಾರಲಿಸೀಸ್ ಇಂಜೆಕ್ಷನ್ ಕೊಟ್ಟ ಪರಿಣಾಮವಾಗಿ ಬದುಕಿ ಬಾಳಬೇಕಾಗಿದ್ದ ಕೊಪ್ಪಳ ಮೂಲದ ಮಹಿಳೆ ಸಾವನ್ನಪ್ಪಿರುವ ಘಟನೆ ಹಳಗಾದ ಖಾಸಗಿ ಆಸ್ಪತ್ರೆಯಲ್ಲಿ ನಡೆದಿದೆ ಎಂದು ದೂರು ದಾಖಲಾದ ಬಗ್ಗೆ ಸ್ಥಳೀಯ ಸಾಮಾಜಿಕ ಜಾಲತಾಣ ಹಾಗೂ ಸುದ್ದಿ ವಾಹಿನಿಗಳು ಸುದ್ದಿ ಮಾಡಿದೆ.

ಸ್ವಪ್ನಾ ರಾಯ್ಕರ್ (32) ಮೃತಪಟ್ಟ ಮಹಿಳೆಯಾಗಿದ್ದಾಳೆ. ಈಕೆಯ ತಂದೆಗೆ ಪ್ಯಾರಲಿಸೀಸ್ ಉಂಟಾಗಿತ್ತು , ಅವರಿಗೆ ಇಂಜೆಕ್ಷನ್ಕೊ ಡಿಸಲು ಆಕೆ ಕೊಪ್ಪಳದಿಂದ ಅವರ ಜೊತೆಗೆ ಹಳಗಾಕ್ಕೆ ಬಂದಿದ್ದಳು ಎನ್ನಲಾಗಿದೆ. ಆಸ್ಪತ್ರೆಗೆ ಬಂದಾಗ ಆಕೆ ತಮಗೆ ಬೆನ್ನು ನೋವು ಇದೆ ಎನ್ನುವ ಬಗ್ಗೆ ಅಲ್ಲಿನ ವೈದ್ಯರ ಬಳಿ ಹೇಳಿಕೊಂಡಿದ್ದಳು, ಅದಕ್ಕೆ ಆ ವೈದ್ಯ ನೀವು ಈ ಒಂದು ಇಂಜೆಕ್ಷನ್ ತೆಗೆದುಕೊಳ್ಳಿ ಮುಂದೆ ನಿಮ್ಮಗೆ ಯಾವ ನೋವು ಕಾಣಿಸಿಕೊಳ್ಳುವುದಿಲ್ಲ ಎಂದು ಹೇಳಿ ಆಕೆಗೆ ಇಂಜೆಕ್ಷನ್ ಕೊಡಿಸಿದ್ದಾರಂತೆ.

RELATED ARTICLES  ಕುಮಟಾ ತಾಲೂಕಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷರಾಗಿ ಪ್ರವೀಣ ಹೆಗಡೆ

ಆಕೆ ಸಹ ಸತ್ಯ ಇರಬಹುದು ಅಂತಾ ವೈದ್ಯರ ಮಾತುಕೇಳಿ ಇಂಜೆಕ್ಷನ್ ತೆಗೆದಕೊಂಡಿದ್ದೆ ತಡ ಸ್ವಲ್ಪ ಸಮಯದಲ್ಲೆ ಆಕೆ ಮೃತ ಪಟ್ಟಿದ್ದಾಳೆ ಎಂದು ವರದಿಯಾಗಿದೆ. ಪ್ಯಾರಲಿಸೀಸ್ ಗೆ ಇಂಜೆಕ್ಷನ್ ಕೊಡುವ ಆಸ್ಪತ್ರೆ ಇದಾಗಿದ್ದು, ರಾಜ್ಯ ಹೊರ ರಾಜ್ಯದಿಂದ ಸಾಕಷ್ಟು ಸಂಖ್ಯೆಯಲ್ಲಿ ಇಂಜೆಕ್ಷನ್ ತೆಗೆದುಕೊಳ್ಳಲು ಇಲ್ಲಿಗೆ ಜನ ಬರುತ್ತಾರೆ. ಆದರೆ ಈ ಮಹಿಳೆಗೆ ಪ್ಯಾರಲಿಸೀಸ್ ಇತ್ತೋ ಇಲ್ಲವೋ ಎಂಬುದನ್ನು ಅರಿಯುವ ಮುನ್ನವೇ ವೈದ್ಯರು ಅದು ಹೇಗೆ ಆಕೆಗೆ ಇಂಜೆಕ್ಷನ್ ಕೊಟ್ಟಿದ್ದಾರೆ ಎನ್ನುವದು ಈಗ ಎಲ್ಲರ ಪ್ರಶ್ನೆಯಾಗಿದೆ. ಈ ಬಗ್ಗೆ ಕಾರವಾರ ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ ಎಂದು ವರದಿಯಾಗಿದೆ.

RELATED ARTICLES  ಕಲ್ಲು ತುಂಬಿದ್ದ ಗುಡ್ಡವೀಗ ಅಧ್ಯಯನ ಸ್ಥಳ: ಕುಮಟಾದಲ್ಲಿರುವ ಈ ಸ್ಥಳ ಯಾವುದು ಗೊತ್ತೇ?