ಹೊನ್ನಾವರ: ಇಲ್ಲಿನ ಗ್ರಾಮ ಪಂಚಾಯತ್ ಕಚೇರಿಯಲ್ಲಿ
ಕರ್ನಾಟಕ ಸರ್ಕಾರ,ಜಲಾನಯನ ಇಲಾಖೆ, ಸ್ಕೊಡವೇಸ್ ಸಂತೆಯಿಂದ ರಚಿತವಾದ ಹಳದಿಪುರ ರೈತ ಉತ್ಪಾದಕ ಕಂಪನಿಯಿಂದ ರೈತ ಮಹಿಳೆಯರಿಗೆ ರೈತ ಉತ್ಪಾದಕ ಕಂಪನಿಯ ಕುರಿತು ಮಾಹಿತಿ ನೀಡಲಾಯಿತು. ಸ್ಕೊಡವೇಸ್ ಸಂಸ್ಥೆಯ ಜಿಲ್ಲಾ ಸಂಯೋಜಕ ಗಂಗಾಧರ ನಾಯ್ಕ ಮಾತನಾಡಿ ರೈತ ಉತ್ಪಾದಕ ಕಂಪನಿಯು ಸರ್ಕಾರದ ಯೋಜನೆಯ ಅನ್ವಯ ರೈತರಿಂದ ರೈತರಿಗಾಗಿ, ರೈತರಿಗೋಸ್ಕರ ಪ್ರಾರಂಭವಾದ ಕಂಪನಿಯಾಗಿದೆ. ರೈತ ಉತ್ಪಾದಕ ಕಂಪನಿಯನ್ನು ಸರ್ಕಾರ ಸ್ಥಾಪನೆ ಮಾಡಿರುವ ಹಿನ್ನೆಲೆ, ಉದ್ದೇಶ, ಕಂಪನಿಯ ಸದಸ್ಯರಿಗೆ ಆಗುವ ಅನುಕೂಲಗಳ ಕುರಿತು ತಿಳಿಸಿಕೊಟ್ಟರು. ಈ ಸಂದರ್ಭದಲ್ಲಿ ಹಳದಿಪುರ ರೈತ ಉತ್ಪಾದಕ ಕಂಪನಿಯ ಮುಖ್ಯ ಕಾರ್ಯನಿರ್ವಾಹಕಿ ಆಶಾ ಭಟ್, ಸಂಜೀವಿನಿ ಸ್ವಸಹಾಯ ಸಂಘದ ಒಕ್ಕೂಟದ ಎಂ.ಪಿ.ಬಿ. ಹೇಮಾ ನಾಯ್ಕ, ಸ್ವಸಹಾಯ ಸಂಘದ ಸದಸ್ಯರು ಹಾಗೂ ಗ್ರಾಮದ ಮಹಿಳೆಯರು ಉಪಸ್ಥಿತರಿದ್ದರು.

RELATED ARTICLES  ಶಿವಗಂಗಾ ವಿವಾಹ ನಿಶ್ಚಿತಾರ್ಥ ತಾಂಬೂಲೋತ್ಸವ ಸಂಪನ್ನ