ಅಂಕೋಲಾ : ಚಲಿಸುತ್ತಿದ್ದ ಓಮಿನಿಯಲ್ಲಿ ಆಕಸ್ಮಿಕವಾಗಿ ಬೆಂಕಿ ಕಾಣಿಸಿಕೊಂಡು, ಹೊತ್ತಿ ಉರಿದು ಸಂಪೂರ್ಣ ಸುಟ್ಟು ಕರಕಲಾದ ಘಟನೆ ಅಂಕೋಲಾ ತಾಲೂಕಿನ ಬಾಳೆಗುಳಿ ಸಮೀಪ ನಡೆದಿದೆ. ಈರ್ಷಾದ್ ಅಹ್ಮದ್ ಹಾಸಿಂ ಪಟೇಲ್ ಇವರ ಮಾಲಕತ್ವದ KA 20 -B 4583 ನಂಬರಿನ ಓಮಿನಿ ಇದಾಗಿದೆ. ಮುರ್ಡೇಶ್ವರ ಬಸ್ತಿಮಕ್ಕಿ ನಿವಾಸಿ ನೌಶಾದ್ ಹಾಸಿಂ ಪಟೇಲ್ ಎನ್ನುವವರು, ಗೋವಾದಿಂದ ತನ್ನ ಹೆಂಡತಿ ಮತ್ತು ಮಕ್ಕಳನ್ನು ಕರೆತರುವ ಸಲುವಾಗಿ , ತನ್ನ ಸಹೋದರ ಕಾರಿನಲ್ಲಿ ಹೋಗುತ್ತಿದ್ದಾಗ, ದಾರಿ ಮಧ್ಯೆ ಅಂಕೋಲಾ ದಿಂದ ಕಾರವಾರ ಕಡೆ ಸಾಗುವ ರಾ.ಹೆ 66 ರ ಬಾಳೆಗುಳಿ ಓವರ್ ಬ್ರಿಜ್ ಹತ್ತಿರ ಈ ಬೆಂಕಿ ಅವಘಡ ಸಂಭವಿಸಿದೆ.

RELATED ARTICLES  ಶೀಘ್ರದಲ್ಲಿಯೇ ಬರಲಿದೆ ಫೇಸ್ ಬುಕ್ ಮೆಸೆಂಜರ್ ನಲ್ಲಿ ಗ್ರೂಪ್ ಚಾಟ್ ಜೊತೆ, ಒಟ್ಟಿಗೆ ವಿಡಿಯೋ ನೋಡುವ ಸೌಲಭ್ಯ!

ವಾಹನ ಚಲಿಸುತ್ತಿರುವಾಗಲೇ ಅದಾವುದೋ ಕಾರಣದಿಂದ ಬೆಂಕಿ ಕಾಣಿಸಿಕೊಂಡಿತ್ತು ಎನ್ನಲಾಗಿದ್ದು, ಅಪಾಯದ ಅರಿತ ಚಾಲಕ ವಾಹನವನ್ನು ಬದಿಗೆ ನಿಲ್ಲಿಸಿ, ವಾಹನದಿಂದ ಕೆಳಗಿಳಿದು ಬಂದಿದ್ದಾನೆ. ಗ್ಯಾಸ್ ಪಿಟೆಡ್ ವಾಹನವಾಗಿರುವುದರಿಂದ ಬೆಂಕಿಯ ಜ್ವಾಲೆ ಹೆಚ್ಚುತ್ತಾ ಹೋಗಿ, ಕಾರು ಧಗಧಗಿಸಿ ಉರಿಯಲಾರಂಭಿಸಿದೆ. ಸುದ್ದಿ ತಿಳಿದ ಅಗ್ನಿ ಶಾಮಕ ದಳದವರು ಬೆಂಕಿ ನಂದಿಸಲು ಹರ ಸಾಹಸ ಪಡುವಂತಾಯಿತು. ಆದರೂ ಈ ವೇಳೆಗಾಗಲೇ ಓಮಿನಿ ಕಾರ್ ನ ಮುಂಭಾಗದ ಟೈಯರ್, ಸೀಟು ಮತ್ತಿತರ ಭಾಗಗಳು ಬೆಂಕಿಯ ಕೆನ್ನಾಲಿಗೆಯಲ್ಲಿ ಸಂಪೂರ್ಣ ಸುಟ್ಟು ಕರಕಲಾಯಿತು. ವಾಹನ ಚಾಲಕನಿಗೆ ಯಾವುದೇ ಅಪಾಯವಾಗಿಲ್ಲ ಎನ್ನಲಾಗಿದೆ.

RELATED ARTICLES  ಲಾರಿಯಲ್ಲಿ ಸಾಗಿಸುತ್ತಿದ್ದ ಗೋವಾ ಮದ್ಯ ವಶಕ್ಕೆ.