ಕುಮಟಾ : ತಾಲೂಕಿನ ಸರಕಾರಿ ಕಿರಿಯ ಪ್ರಾಥಮಿಕ ಶಾಲೆ ಉಂಚಗಿಯಲ್ಲಿ ವನಮಹೋತ್ಸವ ಕಾರ್ಯಕ್ರಮ ಮತ್ತು ಶ್ರೀ ಮಹಾವಿಷ್ಣು ಕ್ರೀಡಾ ಮತ್ತು ಸಾಂಸ್ಕೃತಿಕ ಬಳಗ (ರಿ ) ಉಂಚಗಿ ಇವರಿಂದ ಶಾಲೆ ಬಳಕೆಗೆ ಅವಶ್ಯವಿರುವ ಪಂಪ್ಸೆಟ್ ವಿತರಣೆ ಕಾರ್ಯಕ್ರಮ ನಡೆಯಿತು.

ಶಾಲೆಗೆ ನೀರಿನ ವ್ಯವಸ್ಥೆಯ ಅನುಕೂಲತೆ ಒದಗಿಸುವ ದೃಷ್ಟಿಯಿಂದ ಶ್ರೀ ಮಹಾವಿಷ್ಣು ಕ್ರೀಡಾ ಮತ್ತು ಸಾಂಸ್ಕೃತಿಕ ಬಳಗ (ರಿ ) ಉಂಚಗಿಯವರು ಕೊಡುಗೆಯಾಗಿ ನೀಡಿದ ಪಂಪ್ಸೆಟ್ ಅನ್ನು ಶಾಲೆಯ ಮುಖ್ಯಶಿಕ್ಷಕರಿಗೆ ಹಾಗೂ ಎಸ್.ಡಿ.ಎಂ‌.ಸಿ ಗೆ ಹಸ್ತಾಂತರ ಮಾಡಿದರು.

RELATED ARTICLES  ಯಾಮಾಷ್ಟಕ ಭಜನೆ ಮತ್ತು ಶ್ರೀ ಶಂಭುಲಿಂಗ ದೇವರ ಜನ್ಮೋತ್ಸವ

ಪಂಚಾಯತ ಸದಸ್ಯರಾದ ಶ್ರೀಕಾಂತ ಶಾಸ್ತ್ರೀ, ಎಸ್. ಡಿ. ಎಂ. ಸಿ ಅಧ್ಯಕ್ಷ ಶಿವಾನಂದ ಗೌಡ , ಮಹಾವಿಷ್ಣು ಕ್ರೀಡಾ ಮತ್ತು ಸಾಂಸ್ಕೃತಿಕ ಬಳಗದ ಅಧ್ಯಕ್ಷ ಗಣಪು ಗೌಡ, ಶಾಲಾ ಮುಖ್ಯಧ್ಯಾಪಕರಾದ ವೀಣಾ ನಾಯ್ಕ, ಶಶಾಂಕ ಶಾಸ್ತ್ರೀ, ರಾಜು ಗೌಡ, ವಿಷ್ಣು ಗೌಡ ಸೇರಿದಂತೆ ಊರಿನ ಪ್ರಮುಖರು ಹಾಜರಿದ್ದರು .

RELATED ARTICLES  ಕಂಟೇನರ್ ಹಾಗು ಲಾರಿ ನಡುವೆ ಅಫಘಾತ